ಬಿಎಸ್ ವೈ- ಎಂಪಿ ಆರ್ ಆರೋಗ್ಯಕ್ಕಾಗಿ

ಹೋಮಹೊನ್ನಾಳಿ.ಏ.೧೯:  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ರಾಜಕೀಯ ಕಾರ್ಯದರ್ಶಿ  ಎಂ ಪಿ ರೇಣುಕಾಚಾರ್ಯ ರವರಿಗೆ  ಕೋವಿಡ್ ಸೋಂಕು ಪತ್ತೆಯಾಗಿದ್ದು  ಆದಷ್ಟು ಬೇಗ ಅವರು ಚೇತರಿಸಿಕೊಂಡು ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿ ಹೊನ್ನಾಳಿಯ ಶ್ರೀ ಚನ್ನಪ್ಪ ಸ್ವಾಮೀಜಿ ಕಲ್ಮಠದಲ್ಲಿ ಮೃತ್ಯುಂಜಯ ಹೋಮ  ನೆರವೇರಿಸಲಾಗಿದೆ.ಈ ವೇಳೆ ಶಾಸಕರ ಸಹೋದರ  ಎಂ ಪಿ ರಮೇಶ್,.ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ ಕೆ ಸುರೇಶ್.ಉಪಾಧ್ಯಕ್ಷ ಮಂಜಪ್ಪ ನೆಲವೊನ್ನೆ,  ಪಲ್ಲವಿ ರಾಜು ದಂಪತಿಗಳು.ಹಾಗೂ ಪುರಸಭೆ ಅಧ್ಯಕ್ಷ ಶ್ರೀಧರ್. ದೊಡ್ಡೇರಿ ಗಿರೀಶ್.ಪಕ್ಷದ ಕಾರ್ಯಕರ್ತರು ಹೋಮ ಪೂಜೆಯಲ್ಲಿ ಭಾಗವಹಿಸಿ ಪ್ರಾರ್ಥಿಸಿಕೊಂಡರು ಹೋಮ ಹಾಗೂ ಪೂಜೆಯನ್ನು ಶಾಸ್ತ್ರಿಗಳಾದ ಅನ್ನದಾನಯ್ಯ ಶಾಸ್ತ್ರಿಗಳು ಹಾಗೂ ಕಳಕಯ್ಯ ಶಾಸ್ತ್ರಿಗಳು ಗವಿಸಿದ್ದಯ್ಯ ಗಂಗಾಧರಯ್ಯ ನೆರವೇರಿಸಿದರು.