ಬಿಎಸ್‌ವೈ ವರ್ತನೆ ಯತ್ನಾಳ್ ಕಿಡಿ

ಬೆಂಗಳೂರು,ಮಾ,೨೭- ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಲೈಂಗಿಕ ಸಿಡಿ ವಿಷಯ ರಾಜ್ಯದಲ್ಲಿ ದೊಡ್ಡ ಸುದ್ದಿ ಮಾಡಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಹಿಳೆಯರೊಂದಿಗೆ ನಡೆದುಕೊಳ್ಳುವ ನಡೆಯ ಬಗ್ಗೆ ಶಾಸಕ ಬಸವನಗೌಡ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾರ್ವಜನಿಕ ಸಭೆಗಳಲ್ಲಿ ಮತ್ತು ಗೃಹ ಕಛೇರಿಗಳಿಗೆ ಬರುವ ಮಹಿಳೆಯರ ಜೊತೆ ಯಡಿಯೂರಪ್ಪ ವರ್ತನೆ ಅವರ ವ್ಯಕ್ತಿತ್ವಕ್ಕೆ ಮತ್ತು ವಯಸ್ಸಿಗೆ ಅತ್ಯಂತ ಅವಮಾನ ಎಂದು ಹೇಳಿದ್ದಾರೆ.
ಈ ಸಂಬಂಧ ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಬಸವನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ದಾಹ ಕುಟುಂಬದ ಹಣದ ದಾಹ ಅತ್ಯಂತ ಅಸಹ್ಯ ಎಂದಿದ್ದಾರೆ.
ಅದರಲ್ಲೂ ಭಾರತೀಯ ಜನತಾ ಪಕ್ಷದ ಎಲ್ಲಾ ಗ್ರಾಮೀಣ ಪ್ರದೇಶದ ಶಾಸಕರಿಗೆ ಸರಿ ಸಮಾನವಾಗಿ ಅಭಿವೃದ್ಧಿ ಹಣವನ್ನು ನೀಡದೆ ಇರುವ ಬಗ್ಗೆ ಮಾನ್ಯ ಯಡಿಯೂರಪ್ಪನವರ ಬಗ್ಗೆ ಶಾಸಕರಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ ಎಂದು ಹೇಳಿದ್ದಾರೆ
ಸುಮಾರು ೬೫ ಶಾಸಕರು ನನ್ನ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸಹಿ ಸಂಗ್ರಹ ಅಭಿಯಾನ ಮಾಡಿದ್ದಾರೆ ಎಂಬುದು ಸಂಪೂರ್ಣ ಸತ್ಯಕ್ಕೆ ದೂರವಾದ ಮಾತು. ನಾನು ಭಾಗವಹಿಸಿದ ಅನೇಕ ಶಾಸಕರುಗಳಿಗೆ ವಿಚಾರಿಸಿದಾಗ ಒಬ್ಬರೂ ಸಹ ಸಹಿ ಮಾಡಿಲ್ಲ ಎಂದು ತಿಳಿಸಿದ್ದಾರೆ