ಬಿಎಸ್‌ಪಿ ಸಭೆ,ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಮಾನ್ವಿ:ನ.04-ಶ್ಯಾಮಸುಂದರ್ ಕುಂಬ್ದಾಳ ಅವರ ನೇತೃತ್ವದಲ್ಲಿ ಬಹುಜನ ಸಮಾಜ ಪಕ್ಷದ ಸಭೆಯನ್ನು ಕರೆದು ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಿನ್ನೆ ಸಾಯಂಕಾಲ ಬಿಎಸ್ ಪಿ ಮುಖಂಡ ಶ್ಯಾಮಸುಂದರ್ ಕುಂಬ್ದಾಳ ಅವರ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷ ಎಂ ಬಸವರಾಜ್ ಭಂಡಾರಿಯವರು ಬಹುಜನ ಸಮಾಜ ಪಕ್ಷದ ಸಭೆಯನ್ನು ಕರೆದು ಮಾನ್ವಿ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರನ್ನು ಎಂ ಡಿ ಇಮಾಮ್ ಸಾಬ್ ಮಾನ್ವಿ, ಉಪಾಧ್ಯಕ್ಷರು ಕಲ್ಲಪ್ಪ ಕಲ್ಲುರು, ಪ್ರಧಾನ ಕಾರ್ಯದರ್ಶಿ ಅಶೋಕ್ ಹೀರಾ, ಕಾರ್ಯದರ್ಶಿ ಚಂದ್ರಶೇಖರ್ ಬಿ ಮಾನ್ವಿ, ಖಜಾಂಚಿ ಖಾಸೀo ಡೊಣಮರಡಿ, ಜಿಲ್ಲಾ ಕಾರ್ಯದರ್ಶಿ ಚನ್ನಬಸವ ಅಮರಾವತಿ, ವಿಧಾನಸಭೆ ಉಸ್ತುವರಿ ಓವನ್ ಸಿರಿವಾರ ಇವರನ್ನು ಆಯ್ಕೆ ಮಾಡಿ ಈ ಎಲ್ಲಾ ಪದಾಧಿಕಾರಿಗಳು ಈ ಕೂಡಲೇ ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಜಿಲ್ಲಾಧ್ಯಕ್ಷ ಎಂ ಬಸವರಾಜ್ ಭಂಡಾರಿ ಅವರು ಆದೇಶಿಸಿದರು.
ಈ ಸಂದರ್ಭದಲ್ಲಿ ಹನುಮಂತರಾಯ ಕಪಗಲ್ ಇನ್ನೂ ಅನೇಕರು ಉಪಸ್ಥಿತರಿದ್ದರು