ಬಿಎಸ್‌ಎನ್‌ಎಲ್‌ ನೆಟವರ್ಕ್ ಸಮಸ್ಯೆ ಪರಿಹರಿಸಿ

ಕೊಟ್ಟೂರು ಮಾ27: ತಾಲೂಕು ಕೇಂದ್ರ ಪಟ್ಟಣದಲ್ಲಿ ಬಿಎಸ್‌ ಎನ್‌ ಎಲ್‌ ನೆಟವರ್ಕ್ ಸರಿ ಇಲ್ಲದ ಕಾರಣ ಬ್ಯಾಂಕ,ವ್ಯಾಪರ ವಹಿವಾಟು ಮಾಡುವ ಉದ್ಯಮಿಗಳು ಹಾಗೂಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಕೂಡಲೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಬ್ಯಾಂಕ ಸಿಬ್ಬಂದಿಗಳು, ಸಾರ್ವಜನಿಕರೂ ಬಿ ಎಸ್.ಎನ್.ಎಲ್. ಕಚೇರಿಗೆ ದೂರು ನೀಡಿದರೂ ಪ್ರಯೋಜನ ವಿಲ್ಲ. ಸತತ 15 ದಿನಗಳಿಂದ ಬಿಎಸ್ ಎನ್.ಎಲ್.ಸರ್ವರ್ ಸಮಸ್ಯೆ ಉದ್ಬವವಾಗಿದ್ದು ಬ್ಯಾಂಕಿನಲ್ಲಿ ತುಂಬಾ ತೊಂದರೆಯಾಗಿದೆ ಎಂದು ಕಾರ್ಪೋರೇಶನ್ ಬ್ಯಾಂಕ ವ್ಯವಸ್ಥಾಪಕ ರಾಮಕೃಷ್ಣ
ಹೇಳಿದರು