ಬಿಎಸ್‌ವೈ ನಿವಾಸಕ್ಕೆ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ,ಏ.೨೪-ಸೋಮವಾರ ಶಿವಮೊಗ್ಗದ ವಿನೋಬನಗರದಲ್ಲಿರುವ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಮಾಜಿಸಚಿವ ಕೆ.ಎಸ್.ಈಶ್ವರಪ್ಪರವರು ಭೇಟಿ ನೀಡಿದ್ದರು. ಚುನಾವಣೆಗೆ ಸಂಬಂಧಿಸಿದಂತೆಯಡಿಯೂರಪ್ಪರ ಜೊತೆ ಸಮಾಲೋಚಿಸಿದ್ದಾರೆ. ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಸೇರಿದಂತೆ ಮೊದಲಾದವರುಉಪಸ್ಥಿತರಿದ್ದರು. ಕಳೆದ ಹಲವು ದಿನಗಳ ನಂತರ ಯಡಿಯೂರಪ್ಪ ಈಶ್ವರಪ್ಪ ಅವರು ಪರಸ್ಪರ ಮುಖಾಮುಖಿಯಾಗುತ್ತಿದ್ದಾರೆ.