ಬಿಎಸ್‍ವೈ ಕುರಿತು ಜಾಮದಾರ್ ಹೇಳಿಕೆ ಖಂಡನೀಯ

ಬೀದರ್ : ಡಿ.29:ರಾಜ್ಯದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರಶ್ನಾತೀತ ಲಿಂಗಾಯತ ನಾಯಕರು ಅವರನ್ನು ಪ್ರಶ್ನಿಸುವ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ಎಂ ಜಾಮದಾರ ಅವರ ಕೊಡುಗೆ ಏನು ಎಂಬುವದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿದ್ದು, ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಸಭೆಯ 24ನೇ ಅಧಿವೇಶನದಲ್ಲಿ ಕೈಗೊಂಡಿರುವ 8 ನಿರ್ಣಯಗಳ ಪೈಕಿ ಲಿಂಗಾಯತರು ಹಿಂದೂಗಳಲ್ಲ ಎಂಬ ನಿರ್ಣಯ ಕೈಗೊಂಡಿದ್ದು ಈ ಕುರಿತಂತೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನಿಲುವನ್ನು ಪ್ರಶ್ನಿಸಿರುವ ಜಾಮದಾರ್ ಅವರ ಕೊಡುಗೆ ಸಮಾಜಕ್ಕೆ ಶೂನ್ಯ ಎಂದರು.
ರಾಜ್ಯದಲ್ಲಿ ಲಿಂಗಾಯತರು ತಲೆ ಎತ್ತಿ ನಡೆಯುವಂಥ ವಾತಾವರಣ ಕಲ್ಪಿಸಿಕೊಟ್ಟವರು, ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಅನುದಾನ ಕೊಟ್ಟವರು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಎಂಬುವದನ್ನು ಜಾಮದಾರ್ ಮರೆಯದಿರಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಕುರಿತು ಅನಗತ್ಯ ಹೇಳಿಕೆಯನ್ನು ನೀಡಬಾರದೆಂದು ಭಾರತೀಯ ಬಸವ ಬಳಗದ ರಾಜ್ಯಧ್ಯಕ್ಷರಾದ ಬಾಬು ವಾಲಿ ತಿಳಿಸಿದ್ದಾರೆ.