ಬಿಎಸ್‍ವೈ ಅವಧಿಯಲ್ಲಿ ಕೊರೊನಾ ವೇಳೆ 40 ಸಾ.ಕೋ.ಅವ್ಯವಹಾರ:ಯತ್ನಾಳ ಆರೋಪ

ವಿಜಯಪುರ, ಡಿ.26:ಬಿಜೆಪಿ ಸರಕಾರದ ಕಾಲಾವಧಿಯಲ್ಲಿ ಕೊರೋನಾದ ವೇಳೆ 40,000 ಕೋಟಿ ರುಪಾಯಿ ಅವ್ಯವಹಾರ ಮಾಡಲಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಯತ್ನಾಳ,
ಯಾರ್ಯಾರು ಲೂಟಿ ಮಾಡಿ ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ ಎಂಬುದನ್ನು ಹೊರ ತೆಗೆಯುತ್ತೇನೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ಬಾಂಬ್ ಹಾಕಿದರು.
ಜನೆವರಿ 5 ರಂದು ಡಿಕೆಶಿ ವಿರುದ್ಧದ ವಿಚಾರಣೆ ಹೈಕೋರ್ಟ್ ನಲ್ಲಿದೆ
ನಂತರ ಅಪ್ಪಾಜಿಯವರದ್ದೇ ಇದೆ.
ಯಡಿಯೂರಪ್ಪ ಸಿಎಂ ಇದ್ದಾಗ
ಕೊರೊನಾದಲ್ಲಿ 45 ರೂಪಾಯಿ ಬೆಲೆಯ ಮಾಸ್ಕ್ ಗೆ 485 ರೂಪಾಯಿ ಹಾಕಿದ್ದಾರೆ.
ಬೆಂಗಳೂರಲ್ಲಿ ಹತ್ತು ಸಾವಿರ ಬೆಡ್ ಮಾಡಿದ್ದಾಗಿ ಹೇಳಿದ್ದರು.
10 ಸಾವಿರ ಬೆಡ್ ಗಳನ್ನು ಬಾಡಿಗೆ ಪಡೆದಿದ್ದರು.
ಆದರೆ ಬಾಡಿಗೆ ಹಣದಲ್ಲೇ ಬೆಡ್ ಗಳನ್ನ ಖರೀದಿ ಮಾಡಿದ್ದರೆ ಎರಡೆರಡು ಬೆಡ್ ಗಳು ಬರುತ್ತಿದ್ದವು.ಇದರಲ್ಲಿ ಎಷ್ಟು ಸಾವಿರ ಕೋಟಿ ರೂಪಾಯಿ ಕೊಳ್ಳೆ ಹೊಡೆದಿರಬಹುದು ಎಂದರು.
ಕೊರೋನಾ ವೇಳೆ 40,000 ಕೋಟಿ ರೂಪಾಯಿ ಅವ್ಯವಾರ ಮಾಡಿದ್ದಾರೆ.
ಒಂದೊಂದು ಕೊರೋನಾ ರೋಗಿಗಳಿಗೆ 8 ರಿಂದ 10 ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆ.
ನಮ್ಮ ಸರ್ಕಾರವಿದ್ದರೇನು, ಕಳ್ಳರು ಕಳ್ಳರೇ ಅಲ್ಲವಾ
ಈ ವಿಚಾರವನ್ನು ಯಡಿಯೂರಪ್ಪ ಕುರಿತು ವಿಧಾನಸೌಧದಲ್ಲಿ ಹೇಳಿದ್ದೇನೆ
ನನಗೆ ಕೊರೊನಾ ಪಾಸಿಟಿವ್ ಆದಾಗ ಮಣಿಪಾಲ್ ಆಸ್ಪತ್ರೆಯಲ್ಲಿ 5 ಲಕ್ಷ 80 ಸಾವಿರ ತೆಗೆದುಕೊಂಡರು. ಇಷ್ಟು ಹಣವನ್ನು ಬಡವರಾದವರು ಎಲ್ಲಿಂದ ಕೊಡಬೇಕೆಂದು ವಿಧಾನಸೌಧದಲ್ಲಿ ಮಾತನಾಡಿದ್ದೆ.
ಆರೋಗ್ಯ ವಿಚಾರದಲ್ಲಿ ನಾನು ಯಾವುದೇ ರೀತಿಯ ಸರ್ಕಾರದಿಂದ ಹಣ ಇಲ್ಲಿವರೆಗೂ ಪಡೆದಿಲ್ಲ.
ಶಾಸಕರಿಗೆ 2 ಲಕ್ಷ ರೂಪಾಯಿ ಸಂಬಳವಿದೆ. ನಾನು ಕಮಿಟಿ ಮೀಟಿಂಗಿಗೆ ಹೋಗಿ ಬಂದರೆ 65 ಸಾವಿರ ರೂಪಾಯಿ ಸಿಗುತ್ತದೆ
ತೆಗೆದುಕೊಂಡರೆ ನಾವು ಮನುಷ್ಯರಾ? ಎಂದು ಹೇಳಿದರು.
ಇವರು ನನಗೆ ನೊಟೀಸ್ ಕೊಡಲಿ, ಪಕ್ಷದಿಂದ ಹೊರ ಹಾಕಲು ನೋಡಲಿ. ಇವರೆಲ್ಲರ ಬಣ್ಣ ಬಯಲಿಗೆಳೆಯುತ್ತೇನೆ ಎಂದು ಯತ್ನಾಳ ಗುಡುಗಿದರು.
ಸತ್ಯ ಹೇಳಿದರೆ ಎಲ್ಲರಿಗೂ ಭಯ. ಹಾಗಾಗಿ ಭಯದಲ್ಲಿ ಇಡಬೇಕಾಗುತ್ತದೆ.
ಎಲ್ಲರೂ ಕಳ್ಳರಾದರೆ ರಾಜ್ಯ, ದೇಶವನ್ನು ಯಾರು ಉಳಿಸುತ್ತಾರೆ.
ಪ್ರಧಾನಿ ಮೋದಿ ಅವರು ಇದ್ದಾರೆ ಎಂಬ ಕಾರಣಕ್ಕೆ ದೇಶ ಉಳಿದಿದೆ.
ಈ ದೇಶದಲ್ಲಿ ಹಿಂದೆ ಬಹಳ ಹಗರಣಗಳಾಗಿವೆ.
ಕಲ್ಲಿದ್ದಲು ಹಗರಣ 2ಜಿ ಹಗರಣ ಆಗಿವೆ. ಮೋದಿ ಅವರ ಕಾಲದಲ್ಲಿ ಒಂದಾದರೂ ಹಗರಣ ನೋಡಿದ್ದೀರಾ ಎಂದು ಯತ್ನಾಳ್ ಪ್ರಶ್ನಿಸಿದರು.
ಮೋದಿ ಅವರ ಬಗ್ಗೆ ಕೇವಲ ಟೀಕೆ ಮಾಡುತ್ತಾರೆ. ಆದರೆ ಮೋದಿಯವರು ಭ್ರಷ್ಟಾಚಾರದಲ್ಲಿ ಇದ್ದಾರೆ ಎಂಬ ಹೇಳುವ ತಾಕತ್ತು ದೇಶದಲ್ಲಿ ಯಾರಿಗಾದರೂ ಇದೆಯಾ? ಎಂದರು.
ಮೋದಿಯವರಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ.
ಇಂಥ ಯಡಿಯೂರಪ್ಪಗಾಗಿ ನಾವು ಕೆಲಸ ಮಾಡಲ್ಲ ಎಂದು ನುಡಿದರು.