ಬೆಂಗಳೂರು: ನಗರದ ಬಾಗಲೂರು ಬಳಿಯ ಬಿಎಸ್‌ಎಫ್‌ನಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನ-೨೦೨೩ ಘೋಷವಾಕ್ಯದಡಿಯಲ್ಲಿ ಸ್ವಚ್ಛ ಭಾರತ ಅಭಿಯಾನ ನಡೆಸಿದರು.
ಇದೇ ವೇಳೆ ಬಿಎಸ್‌ಎಫ್‌ನ ಸ್ವಯಂಸೇವಕರಿಗೆ ಸನ್ಮಾನ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
೦೬ ಅಧಿಕಾರಿಗಳ ತಂಡ ೯೫ಎಸ್‌ಒಗಳು ಮತ್ತು ೩೨೦ ಓಆರ್‌ಎಸ್‌ಗಳು ಸೇರಿದಂದೆ ನೌಕರರ ಕುಟುಂಬವರ್ಗದವರು ಅಭಿಯಾನದಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇನ್ಸ್‌ಪೆಕ್ಟರ್ ಜನರಲ್ ಈಪ್ಪೆನ್ ಪಿ.ವಿ. ಮಾತನಾಡಿ, ದೈಹಿಕ ಸ್ವಾಸ್ಥ್ಯ ಮತ್ತು ಆರೋಗ್ಯಕರ ವಾತಾವರಣಕ್ಕಾಗಿ ಸ್ವಚ್ಛತೆ ಮುಖ್ಯವಾಗಿದೆ. ಹೀಗಾಗಿ, ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿರುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಯಾಗಿದೆ. ಗಾಂಧೀಜೀಯವರ ಕನಸನ್ನು ಸಾಕಾರಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನದ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಅದನ್ನು ಯಶಸ್ವಿಯಾಗಿಸುವುದು ನಮ್ಮೆಲ್ಲರ ಆದ್ಯತೆ ಎಂದು ತಿಳಿಸಿದರು.
ಭವಿಷ್ಯದ ಪೀಳಿಗೆ ಆರೋಗ್ಯವಾಗಿರಬೇಕಾದರೆ ಪರಿಸರ ಸ್ವಚ್ಛತೆ ಮುಖ್ಯವಾಗಿದೆ ಈ ನಿಟ್ಟಿನಲ್ಲಿ ಯುವ ಜನತೆ ಪರಿಸರ ಸ್ವಚ್ಚತೆಗೆ ಹೆಚ್ಚು ಒತ್ತು ನೀಡಬೇಕೆಂದರು
ಈ ವೇಳೆ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಹೇಮಂತ್ ಕುಮಾರ್ ಝಾ,ಕಮಾಂಡೆಂಟ್ ಟಿ.ನರಸಿಂಹ ರೆಡ್ಡಿ, ಅಧಿಕಾರಿಗಳಾದ ರಾಮ್ ನಿವಾಸ್ ಶರ್ಮಾ, ವಿಶಾಲ್, ವಿನಿತ್ ಕಲ್ಸಿ, ವಿಷ್ಣುರಾಮ್ ಸೇರಿದಂತೆ ಇನ್ನಿತರರು.