ಬಿಎಸ್ಪ್ಪಿಯಿಂದ ಚಿನ್ನಪ್ಪ ಚಿಕ್ಕಹಾಗಡೆ ನಾಮಪತ್ರ ಸಲ್ಲಿಕೆ

ಆನೇಕಲ್.ಏ. ೧೮- ಬಿಎಸ್ಪಿ ಪಕ್ಷದ ಅಭ್ಯರ್ಥಿ ಡಾ|| ಚಿನ್ನಪ್ಪ ಚಿಕ್ಕಹಾಗಡೆ ರವರು ಕೃತಕ ಆನೆ ಮೇಲೆ ಕುಳಿತು ಸಾವಿರಾರು ಬಿಎಸ್ಪಿ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಜೊತೆಗೂಡಿ ಆನೇಕಲ್ ಎಎಸ್ ಬಿ ಮೈದಾನದಿಂದ ಹಲವು ಕಲಾತಂಡಗಳೊಂದಿಗೆ ಸಾವಿರಾರು ಬಿಎಸ್ಪಿ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಜೊತೆಗೂಡಿ ಆನೇಕಲ್ ತಹಶೀಲ್ದಾರ್ ಕಚೇರಿ ವರೆಗೆ ಮೆರವಣಿಗೆ ನಡೆಸಿ ನಂತರ ಚುನಾವಣಾದಿಕಾರಿಗೆ ನಾಮಪತ್ರ ಸಲ್ಲಿಸಿದ ದೃಶ್ಯಗಳು ಕಂಡು ಬಂತು.
ಈ ವೇಳೆ ಬಿಎಸ್ಪಿ ಪಕ್ಷದ ಅಭ್ಯರ್ಥಿ ಡಾ|| ಚಿನ್ನಪ್ಪ ಚಿಕ್ಕಹಾಗಡೆ ರವರು ಮಾತನಾಡಿ ಆನೇಕಲ್ ಕ್ಷೇತ್ರದಲ್ಲಿ ಹೊಸ ಬದಲಾವಣೆ ಗಾಳಿ ಬೀಸಿದ್ದು ಈ ಬಾರಿ ಆನೇಕಲ್ ಕ್ಷೇತ್ರದ ಜನತೆ ಬಿಎಸ್ಪಿ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರು.
ಪ್ರಚಾರದಲ್ಲಿ ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷ ಸಿ.ಎಲ್. ಮುನಿಯಲ್ಲಪ್ಪ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪದಾದಿಕಾರಿಗಳು ಮತ್ತು ಬಿಎಸ್ಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.