ಬಿಎಸ್ಪಿ ಶಾಸಕರು ಕಾಂಗ್ರೆಸ್ ಜತೆ ವಿಲೀನ; ಸ್ಪೀಕರ್ ಗೆ ಸುಪ್ರೀಂ ನೋಟಿಸ್

ನವದೆಹಲಿ, ಜ 7- ಆರು ಮಂದಿ ಬಿಎಸ್ ಪಿ ಶಾಸಕರು ಕಾಂಗ್ರೆಸ್ ಜತೆ ವಿಲೀನಗೊಂಡ ಪ್ರಕರಣ ಕುರಿತಂತೆ ರಾಜಸ್ಥಾನ ಸ್ಪೀಕರ್ ಗೆ ಸುಪ್ರೀಂಕೋರ್ಟ್ ಇಂದು ನೋಟೀಸ್ ನೀಡಿದೆ.
ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳಾದ ಎಸ್ .ಅಬ್ದುಲ್ ನಜೀರ್ ಹಾಗೂ ಕೆ.ಎಂ. ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ, ವಿಧಾನ ಸಭೆ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಗೆ ಪಕ್ಷಾಂತರಗೊಂಡಿರುವ ಎಲ್ಲ ಆರು ಮಂದಿ ಶಾಸಕರಿಗೆ ನೋಟೀಸ್ಚಜಾರಿ ಮಾಡಿತು.
ಆರು ಮಂದಿ ಬಿಎಸ್ ಪ ಶಾಸಕರು ಕಾಂಗ್ರೆಸ್ ಪಕ್ಷದ ಜತೆ ವಿಲೀನಗೊಳ್ಳುವುದರ ವಿರುದ್ಧ ಮೂರು ತಿಂಗಳ ಒಳಗಾಗಿ ಅನರ್ಹತೆ ಕುರಿತು ಅರ್ಜಿ ಸಲ್ಲಿಸುವಂತೆ ಸ್ಪೀಕರ್ ಗೆ ರಾಜಸ್ಥಾನ ಹೈಕೋರ್ಟ್ ಸೂಚಸಿತ್ರು.
ಇದರ ವಿರುದ್ಧ, ಬಿಎಸ್ ಪಿ ಮತ್ತು ಬಿಜೆಪಿ ಶಾಸಿ ಮದನ್ ದಿಲಾವರ್‌ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ.