ಬಿಎಸ್‍ಎಫ್ ಯೋಧನ ಸಾವು ಸರ್ಕಾರಿ ಗೌರವದೊಡನೆ ಅಂತ್ಯಕ್ರಿಯೆ


ಚನ್ನಮ್ಮನ ಕಿತ್ತೂರು : 12 ಪಂಜಾಬ ಗಡಿ ಭದ್ರತಾ ಪಡೆ ಬಿಎಸ್‍ಎಫ್ ನಲ್ಲಿ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಗಿರಿಯಾಲ ಗ್ರಾಮದ ಯೋಧ ಉದಯ ಪುಂಡಲೀಕಪ್ಪ ಗಾಳಿಯವರು ಮಲೇರಿಯಾ ಜ್ವರ ಪೀಡಿತರಾಗಿ ಸಾವನ್ನಪ್ಪಿದ್ದು ಅವರ ಅಂತ್ಯಕ್ರಿಯು ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೇರವೇರಿತು.
ಮೃತಯೋಧ ತಂದೆ, ತಾಯಿ, ಪತ್ನಿ, ಪುತ್ರ, ಇಬ್ಬರು ಪುತ್ರಿಯರು. ಸಹೋದರ, ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಮೃತ ಯೋಧನ ಗಾಳಿಯವರ ಪಾರ್ಥಿವ ಶರೀರ ಡೊಂಬರಕೊಪ್ಪ ಪ್ರವಾಸಿ ಮಂದಿರಕ್ಕೆ ಆಗಮಿಸಿದಾಗ ಕಿತ್ತೂರ ಗ್ರೇಡ್-2 ತಹಶೀಲ್ದಾರ ರವೀಂದ್ರ ನೇಸರಗಿ, ಸಿಪಿಐ ಸುನೀಲ್ ಪಾಟೀಲ, ಪಿಎಸ್‍ಐ ಪ್ರವೀಣ ಗಂಗೋಳ, ಮಾಜಿ ಯೋಧರು ಅಂತಿಮ ನಮನ ಸಲ್ಲಿಸಿದರು.
ನಂತರ ಕಿತ್ತೂರ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಕಲ ಗೌರವ ಮೂಲಕ ಘೋಷಣೆ ಕೂಗುತ್ತ ಮೆರವಣಿಗೆ ಮುಖಾಂತರ ಚನ್ನಾಪೂರ ಮಾರ್ಗವಾಗಿ ಸ್ವಗ್ರಾಮಕ್ಕೆ ತರಲಾಯಿತು. ಅಲ್ಲಿ ಸರ್ಕಾರಿ ಶಾಲಾ ಅವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಿದ ನಂತರ ಜಿಲ್ಲಾಢಳಿತ ಮತ್ತು ಬಿಎಸ್‍ಎಫ್ ನವರು ಅಂತಿಮ ವಿಧಿವಿಧಾನ ನೇರವೇರಿಸಿ ಗಾಳಿಯಲ್ಲಿ ಗುಂಡು ಹಾರಿಸಲಾಯಿತು.
ಯೋಧ ಬಿಎಸ್‍ಎಫ್ ನಲ್ಲಿ 17 ವರ್ಷ ಸೇವೆಸಲ್ಲಿಸಿದ್ದರು. ಆರು ತಿಂಗಳ ಹಿಂದಷ್ಟೇ ಕಾಶ್ಮೀರದಿಂದ ತ್ರಿಪೂರಾಕ್ಕೆ ವರ್ಗಾವಣೆಯಾಗಿದ್ದರು. ಇವರು ಮಲೇರಿಯಾ ಜ್ವರದಿಂದ ಬಳಲುತ್ತಿದ್ದರೆನ್ನಲಾಗಿದೆ.
ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆದಿದ್ದು, ಬಿಎಸ್‍ಎಫ್ ಅಧಿಕಾರಿಗಳು, ಉಪ ವಿಭಾಗ ಅಧಿಕಾರಿ ಪ್ರಭಾವತಿ ಪಕ್ಕಿರಪೂರ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಗ್ರಾ.ಪಂ ಅಧ್ಯಕ್ಷೆ ಮಲ್ಲವ್ವಾ ನಾವಲಗಟ್ಟಿ, ಗ್ರಾಪಂ ಸರ್ವ ಸದಸ್ಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮೇರಿ ಯಲಕಪತಿ ನಾಗಯ್ಯಾ, ಅನಿಲ ಎಮ್ಮಿ, ಬಸವರಾಜ ಸಂಗೊಳ್ಳಿ, ಅಸ್ಫಾಕ ಹವಾಲ್ದಾರ, ಫಕ್ಕಿರಪ್ಪ ಜಾಂಗಟಿ, ರವಿ ಪರಸನಟ್ಟಿ, ಸುರೇಶ ತಳವಾರ, ಬಸವರಾಜ ಗಾಳಿ, ರಾಜು ಜಾಗಂಟಿ, ಪೆÇಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ರಾಣಿ ಚನ್ನಮ್ಮ ಸೇನಾ ತರಬೇತಿ ಕೇಂದ್ರದ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಕಿತ್ತೂರು ಹಾಗೂ ಸುತ್ತಮುತ್ತ ಇರುವ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಗ್ರಾಪಂ ಸರ್ವ ಸದಸ್ಯರು, ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.