ಬಿಎಲ್ ಎ 1 ಗೆ ಶ್ರವಣಕುಮಾರ್ ರೆಡ್ಡಿ ನೇಮಕ

ಬಳ್ಳಾರಿ ಏ 1 : ನಗರ ಬಿಜೆಪಿ ಘಟಕದಿಂದ ಬಿ ಎಲ್ ಎ 1 ಗೆ ಜಿ. ಶ್ರವಣಕುಮಾರ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಅವರಿಗೆ ನಗರ ಶಾಸಕ ಸೋಮಶೇಖರ ರೆಡ್ಡಿ ಅವರಿಂದು ಪಕ್ಷದ ಕಚೇರಿಯಲ್ಲಿ ನೇಮಕಾತಿ ಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪಕ್ಷದ ನಗರ ಅಧ್ಯಕ್ಷ ಕೆ.ಬಿ.ವೆಂಕಟೇಶ್ವರ, ಪ್ರದಾನ ಕಾರ್ಯದರ್ಶಿ ಗುಗ್ಗರಹಟ್ಟಿ ರಾಮಾಂಜಿನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮೋತ್ಕರ್ ಮೊದಲಾದವರು ಇದ್ದರು‌