ಬಿಎಲ್‍ಡಿಇ ಸಂಸ್ಥೆಗೆ ದೇಹದಾನ

ವಿಜಯಪುರ,ಫೆ.12: ನಗರದ ನಿವಾಸಿ ದೇವಕಮ್ಮ ಶಾಂತಯ್ಯ ಹಿರೇಮಠ ಅವರು ತಮ್ಮ ದೇಹವನ್ನು ಬಿಎಲ್‍ಡಿಇ ಸಂಸ್ಥೆಗೆ ದಾನ ಮಾಡಿದ್ದಾರೆ.
ದಿ: ದೇವಕೆಮ್ಮ ಶಾಂತಯ್ಯ ಹಿರೇಮಠ ಅವರು ಫೆ.6 ರಂದು ತಮ್ಮ 94ನೇ ವಯಸ್ಸಿನಲ್ಲಿ ಮರಣ ಹೊಂದಿದ್ದು, ವೈದ್ಯಕೀಯ ವಿದ್ಯಾಭ್ಯಾಸ ಹಾಗೂ ಸಂಶೋಧನೆಗೆ ಪೂರಕವಾಗಲು ತಮ್ಮ ದೇಹವನ್ನು ದಾನ ಮಾಡಿರುವುದರಿಂದ ಆವರ ನಿರಾಪೇಕ್ಷಿತ ಸೇವಾಭಾವಕ್ಕೆ ಕರ್ನಾಟಕ ರಾಜ್ಯ ದೇಹದಾನ ಸಂಸ್ಥೆ ಅಂಗರಚನಾಶಾಸ್ತ್ರ ವಿಭಾಗ ಬಿಎಲ್‍ಡಿಇ ವಿಶ್ವವಿದ್ಯಾಲಯ ಗೌರವ ಪ್ರಶಸ್ತಿ ನೀಡುವ ಮೂಲಕ ಕೃತಜ್ಞತೆ ಸಲ್ಲಿಸಿದೆ.