ಬಿಎಲ್‍ಓ ಕಾರ್ಯದಿಂದ ಬಿಡುಗಡೆಗೊಳಿಸಲು ಮನವಿ

ತಾಳಿಕೋಟೆ:ಜು.22: ತಾಲೂಕಿನ ಬಿ.ಎಲ್.ಓ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಮುಕ್ತಿ (ಬಿಡುಗಡೆ) ಗೊಳಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಘಟಕದ ವತಿಯಿಂದ ತಹಶಿಲ್ದಾರರಿಗೆ ಶುಕ್ರವಾರರಂದು ಮನವಿ ಸಲ್ಲಿಸಿ ಒತ್ತಾಯಿಸಿದರು.

  ಬಿ.ಎಲ್.ಓ ಕಾರ್ಯದಿಂದ ಶಾಲಾ ಗುಣಮಟ್ಟದ ಶಿಕ್ಷಣದ ಮೇಲೆ ಪರಿಣಾಮ ಬಿರುತ್ತಿದ್ದು ಈಗ ಒಂದು ತಿಂಗಳ ಕಾಲ ನಡೆಯುವ ಮನೆ ಮನೆ ಸರ್ವೆ ಕಾರ್ಯ ಮಾಡುವುದರಿಂದ ಶಾಲಾ ಶೈಕ್ಷಣಿಕ ಚಟುವಟಿಕೆಗಳಾದ ಎಸ್.ಎ1, ಪ್ರತಿಭಾ ಕಾರಂಜಿ, ತಾಲೂಕು ಮಟ್ಟದ ಕ್ರೀಡಾಕೂಟಗಳು ಹಾಗೂ ಪ್ರತಿ ತಿಂಗಳ 3ನೇ ಶನಿವಾರ ಪಾಲಕ/ ಪೆÇೀಷಕರ ಸಭೆಗೆ ಹಿಗೆ ನಿರಂತರ ಶೈಕ್ಷಣಿಕ ಚಟುವಟಿಕೆಗಳು ಇರುವುದರಿಂದ ಗುಣಮಟ್ಟದ ಶಿಕ್ಷಣ ಸಾಧಿಸಲು ತೊಂದರೆ ಆಗುತ್ತಿದ್ದು, ಹಲವಾರು ಶಾಲೆಗಳಲ್ಲಿ 100ಕ್ಕೆ 60 ರಷ್ಟು ಶಿಕ್ಷಕರ ಕೊರತೆ ಅನುಭವಿಸುತ್ತಿರುವುದರಿಂದ ಪಾಲಕ ಪೆÇೀಷಕರ ದೂರುಗಳು ಅವರ ಮಕ್ಕಳ ಗುಣಾತ್ಮಕ ಶಿಕ್ಷಣದ ಮೇಲೆ ಆಗುತ್ತಿರುವ ಪರಿಣಾಮ ಇದರಿಂದ ಅನೇಕ ದೂರುಗಳು ಇಲಾಖೆಗೆ ದಾಖಲಾಗಿದ್ದು ಆದ್ದರಿಂದ ತಾವುಗಳು ಮಕ್ಕಳ ಗುಣಮಟ್ಟದ ಶೈಕ್ಷಣಿಕ ಚಟುವಟಿಕೆಗಳಲ್ಲಿ ಶಿಕ್ಷಕರನ್ನು ತೊಡಗಿಕೊಳ್ಳುವಂತೆ ತಾವುಗಳು ಈ ಬಿ.ಎಲ್.ಓ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರನ್ನು ಮುಕ್ತಿಗೊಳಿಸಬೇಕೆಂದು (ಬಿಡುಗಡೆ) ಗೊಳಿಸಬೇಕೆಂದು ತಹಶಿಲ್ದಾರ ಕೀರ್ತಿ ಚಾಲಕ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಸಮಯದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಘಟಕದ ಅಧ್ಯಕ್ಷ ಬಿ.ಟಿ.ವಜ್ಜಲ, ಉಪಾಧ್ಯಕ್ಷ ಎ.ಆರ್.ಹಜೇರಿ, ಟಿ.ಎಸ್.ಲಮಾಣೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್.ಬಿ.ಆಲೂರ, ಪ್ರಧಾನ ಕಾರ್ಯದರ್ಶಿ ಎಸ್.ಬಿ.ಬಿರಗೊಂಡ, ಸಹ ಕಾರ್ಯದರ್ಶಿ ಎಂ.ಎಲ್.ಚೌದ್ರಿ, ಸಂಘಟನಾ ಕಾರ್ಯದರ್ಶಿ ಅಂಬಿಕಾ ಗೋಗಿ, ಜಿ.ಕೆ.ಪತ್ತಾರ, ಆರ್.ಎಸ್.ಹಿಪ್ಪರಗಿ, ಸಿದ್ರಡ್ಡಿ ಸರ್, ಸೋಮು ಯಾಳಗಿ, ಕಲ್ಲಪ್ಪ ಹಲಗಿ, ಬೆಣ್ಣೂರ ಸರ್, ಬಿ.ಟಿ.ಸಜ್ಜನ, ಕಲಾಲ ಸರ್, ಶ್ರೀಮತಿ ಬನ್ನೇಟ್ಟಿ, ಮುಜಾವರ ಸರ್, ಕಲಕೇರಿ ಸರ್, ಅಂಬಲ್ಯಾಳ ಸರ್, ಎ.ಎಸ್.ಪಾಟೀಲ, ಸಾರಮುನಿ ಸರ್, ಶಂಕ್ರಗೌಡ ಬಿರಾದಾರ, ಆರ್.ಎಫ್.ಹಿರೇಮಠ, ಮಕಾಂದಾರ ಸರ್, ಮಹೇಂದ್ರಕರ ಸರ್, ಕೊಂಡಗೂಳಿ ಸರ್, ನಾಗೂರ ಸರ್, ಅಸ್ಕಿ ಸರ್, ಶಾಂತಾ ಅಂಬಿಗೇರ, ನಿಂಗರಾಜ ನೀರಲಗಿ, ಬಳಗಾನೂರ ಸರ್, ಬೇದರಕರ ಸರ್, ಸಿ.ಬಿ.ಬಿರಾದಾರ, ಸಿದ್ದು ನಾಗೂರ ಮೊದಲಾದವರು ಇದ್ದರು.