
ಚಾಮರಾಜನಗರ, ಏ.01- ಜಿಲ್ಲೆಯ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿರುವ ಬಿಎಂಸಿ ಕೇಂದ್ರಗಳಲ್ಲಿ ಶೇಖರಣೆಯಾಗುವ ಹಾಲಿನ ಗುಣಮಟ್ಟದಿಂದಾಗಿ ಹೆಚ್ಚಿನ ಲಾಭ ಪಡೆಯಲು ಸಾಧ್ಯವಿದೆ. ನಂದಿನಿ ಇತರೇ ಉತ್ಪನ್ನಗಳ ತಯಾರಿಕೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ ತಿಳಿಸಿದರು.
ಕುಶಾÀಲನಗರದಲ್ಲಿ ಜಿಲ್ಲೆಯ ಚಾ.ನಗರ, ಯಳಂದೂರು ಹಾಗೂ ಕೊಳ್ಳೇಗಾಲ ತಾಲೂಕುಗಳ ಬಿಎಂಸಿ ಕೇಂದ್ರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಶುದ್ದ ಹಾಲು ಉತ್ಪಾದನೆ, ಸಂಗ್ರಹಣೆ ಸಹಕಾರ ಸಂಘಗಳ ಕಾಯ್ದೆ, ಕಾನೂನು ಮತ್ತು ಲೆಕ್ಕಪತ್ರ ರಾಜ್ಯ ಮಟ್ಟದ ವಿಶೇಷ ಕಾರ್ಯಾಗಾರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಮೈಸೂರು ವ್ಯಾಪ್ತಿಯಲ್ಲಿದ್ದಾಗ ಚಾಮರಾಜನಗರ ಜಿಲ್ಲೆಯ ಹಾಲು ರಾಮಸಮುದ್ರದ ಹಾಲು ಶೀಥಲೀಕರಣ ಘಟಕದಲ್ಲಿ ಶೇಖರಣೆಗೊಂಡು ಅಲ್ಲಿಂದ ಮೈಸೂರು ಡೇರಿಗೆ ಸಾಗಾಣಿಕೆಯಾಗುತಿತ್ತು. ಇದರಿಂದ ಹಾಲಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಕಷ್ಟವಾಗಿತ್ತು. 2 ಸಾವಿರ ಲೀಟರ್‍ಗಿಂತ ಹೆಚ್ಚು ಹಾಲು ಸಂಗ್ರಹಿಸುವ ಡೇರಿಗಳೊಂದಿಗೆ ಹಾಲು ಶೇಖಕರಣೆ ಮಾಡಲು ಡೇರಿಗಳಲ್ಲಿ ಬಿಎಂಸಿ ಕೇಂದ್ರಗಳನ್ನು ಆರಂಬಿಸಿ, ಹಾಲಿನ ಗುಣಮಟ್ಟವನ್ನು ಕಾಪಾಡಿಕೊಂಡು ಹೆಚ್ಚಿನ ಲಾಭ ಪಡೆದುಕೊಳ್ಳಲಾಗಿದೆ. ಇದರ ನಿರ್ವಹಣೆ ಮತ್ತು ಲೆಕ್ಕ ಪತ್ರಗಳ ಮಂಡನೆ ಮತ್ತು ಪಾರದರ್ಶಕೆಯನ್ನು ಕಾಪಾಡಿಕೊಳ್ಳಲು ತಾವೆಲ್ಲರು ವೃತ್ತಿ ನೈಪುಣ್ಯತೆಯನ್ನು ಹೊಂದಬೇಕು ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮಲೆಯೂರು ನಾಗರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಸಹಕಾರ ಒಕ್ಕೂಟವು ಸಹಕಾರ ಶಿಕ್ಷಣ ಸಹಕಾರ ಶಿಕ್ಷಣ ನಿಧಿ ಪಡೆದುಕೊಳ್ಳುವ ಜೊತೆಗೆ ಇಂಥ ಉಪಯುಕ್ತವಾದ ಕಾರ್ಯಾಗಾರವನ್ನು ಆಯೋಜನೆ ಮಾಡಿ, ಸಿಇಓಗಳ ತಿಳುವಳಿಕೆ ಮಟ್ಟ, ಜ್ಞಾನವನ್ನು ಹೆಚ್ಚಿಸಿಕೊಂಡು ಉತ್ತಮ ಆಡಳಿತ ನಿರ್ವಹಣೆ ಮಾಡುವಂತೆ ತಯಾರು ಮಾಡಲಾಗುತ್ತದೆ. ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಯೂನಿಯನ್ ಉಪಾಧ್ಯಕ್ಷ ಎಂ.ಎಂ. ಪ್ರಭುಸ್ವಾಮಿ, ನಿರ್ದೇಶಕ ಜಿ. ಮಡಿವಾಳಪ್ಪ, ಮುದ್ದಯ್ಯ, ಎಚ್.ಎಂ. ಗಂಗಾಧರಪ್ಪ, ಕೆ. ರಾಜಶೇಖರಪ್ಪ, ಎಚ್.ಎನ್. ಸುಂದರರಾಜ್, ಶಿವಕುಮಾರ್, ಮಹದೇವಪ್ರಸಾದ್, ಎನ್. ಮಹದೇವಸ್ವಾಮಿ, ಎಂ. ರವಿ, ರತ್ನಮ್ಮ, ಮುಖ್ಯ ಕಾರ್ಯನಿರ್ವಾಹಕ ಯೋಗೇಂದ್ರ ನಾಯಕ, ಕಾರ್ಯಕ್ರಮ ಸಮನ್ವಯಾಧಿಕಾರಿ ಶ್ರೀನಿವಾಸಮೂರ್ತಿ ಹಾಗೂ ಮೂರು ತಾಲೂಕುಗಳ ಬಿಎಂಸಿ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿದ್ದರು.