ಬಿಎಂಟಿಸಿ 96 ತರಬೇತಿ ನೌಕರರ ವಜಾ: ಉಳಿದವರು ಹಂತಹಂತವಾಗಿ ವಜಾ: ಎಚ್ಚರಿಕೆ

ಬೆಂಗಳೂರು,ಏ.8- ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾದ ಆರೋಪದ ಮೇಲೆ 96 ಬಿಎಂಟಿಸಿ ತರಬೇತಿ ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿದೆ.

ತರಬೇತಿ ನಿರತ ಸಿಬ್ಬಂದಿ ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದರೂ ಆದೇಶವನ್ನು ಧಿಕ್ಕರಿಸಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತಿಳಿಸಿದೆ.

1400 ಮಂದಿ ಹಾಜರಿಗೆ ಸೂಚನೆ:

ತರಬೇತಿ ನಿರತ ಇನ್ನಿತರೆ ಸಿಬ್ಬಂದಿಗಳು ನಾಳೆಯಿಂದ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎನ್ನುವ ಎಚ್ಚರಿಕೆಯನ್ನು ನೀಡಿದೆ.

ಸರಿ ಸುಮಾರು 1400 ಮಂದಿ ತರಬೇತಿ ಪಡೆಯುತ್ತಿದ್ದು ಅವರೆಲ್ಲರೂ ನಾಳೆಯಿಂದ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ‌‌ ಸಿ. ಶಿಖಾ ಆದೇಶ ಹೊರಡಿಸಿದ್ದಾರೆ.

ಸಾರಿಗೆ ನಿಗಮಗಳ ನಿಯಮಗಳ ಪ್ರಕಾರ ತರಬೇತಿ ಸಿಬ್ಬಂದಿ ಯಾವುದೇ ಮುಷ್ಕರಗಳಲ್ಲಿ ಭಾಗವಹಿಸುವುದಾಗಲಿ, ಸೂಕ್ತ ಕಾರಣಗಳಿಲ್ಲದೇ ಕರ್ತವ್ಯಕ್ಕೆ ಗೈರು ಹಾಜರಾಗುವುದಾಗಲೀ ಒಪ್ಪಂದದ ಪ್ರಕಾರ ತಪ್ಪು ಎಂದು‌ ತಿಳಿಸಲಾಗಿದೆ.

ಸಾರಿಗೆ ನಿಗಮಗಳು ಅಧಿಕಾರ ಬಳಸಿಕೊಂಡು ಅವರನ್ನ ವಜಾ ಮಾಡಬಹುದು. ಗೈರು ಹಾಜರಿ, ಅಪರಾಧ ಪ್ರಕರಣಗಳು ಇರುವಂತಹ ಸಿಬ್ಬಂದಿಯನ್ನ ಇಂದು ವಜಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ

ಸಾರಿಗೆ ನೌಜರರು ಮುಷ್ಕರ ಬಿಡುವವರೆಗೂ ಪ್ರತಿ‌್ದಿದಿನ ಹಂತ ಹಂತವಾಗಿ ವಜಾ ಮಾಡಲಾಗುತ್ತದೆ. ಮೊದಲು ತರಬೇತಿಯಲ್ಲಿರುವ 1.400 ಸಿಬ್ಬಂದಿಯನ್ನ ವಜಾ ಮಾಡಲಾಗುತ್ತದೆ. ನಂತರ ಪ್ರೊಬೆಷನ್​ನಲ್ಲಿ ಇರುವ 1 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ವಜಾ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ