ಬಿಎಂಟಿಸಿ, ಮೆಟ್ರೊ ರೈಲು 57 ತಾಸು ಬಂದ್

ಬೆಂಗಳೂರು, ಏ 23-ರಾಜ್ಯದಲ್ಲಿ ಹೆಮ್ಮಾರಿ ಕೊರೋನಾ ಸೋಂಕು ಕಟ್ಟಿಹಾಕಲು ಇಂದು ರಾತ್ರಿಯಿಂದಲೇ ವಾರಾಂತ್ಯ 57 ತಾಸುಗಳ ಲಾಕ್ ಡೌನ್ ಜಾರಿಯಾಗುತ್ತಿದ್ದು, ನಾಳೆ ಶನಿವಾರ ಮತ್ತು ಭಾನುವಾರ ಕರುನಾಡು ಸಂಪೂರ್ಣ ಸ್ತಬ್ದಬವಾಗಲಿದೆ

ವಾರಾಂತ್ಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ಬಿಎಂಟಿಸಿ ಬಸ್ ಗಳು ಸಂಚರಿಸುವುದಿಲ್ಲ. ತುರ್ತು ಸೇವೆಗಾಗಿ ಮಾತ್ರ 500 ಬಸ್ ಗಳು ಸಂಚರಿಸಲಿವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ . ಸಿಖಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದಲ್ಲಿ ನಮ್ಮ ಮೆಟ್ರೋ ಸಂಚಾರ ಸಹ ಸಂಪೂರ್ಣ ಬಂದ್ ಆಗಲಿದ್ದು, ಇಂದು ಸಂಜೆ 7.30 ರಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಯಾವುದೇ ಮೆಟ್ರೋ ರೈಲು ಸಂಚರಿಸುವುದಿಲ್ಲ. ಇಂದು ಸಂಜೆ 7.30ಕ್ಕೆ ಮೈಸೂರು ರಸ್ತೆ, ಬೈಯಪ್ಪನಹಳ್ಳಿ, ನಾಗಸಂದ್ರ ಮತ್ತು ಸಿಲ್ಕ್ ಸಂಸ್ಥೆಯಿಂದ ಕೊನೆಯ ರೈಲು ಹೊರಡಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಸೋಮವಾರ ಬೆಳಗ್ಗೆ 7ರಿಂದ ಎಂದಿನಂತೆ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್ ಸಿಎಲ್ ಸ್ಪಷ್ಟಪಡಿಸಿದೆ.