ಬಿಎಂಟಿಸಿ ಮತದಾನ ಜಾಗೃತಿ ಕಾರ್ಯಕ್ರಮ

ಬೆಂಗಳೂರು.ಏ೨೮:ಕರ್ನಾಟಕ ಚುನಾವಣಾ ಆಯೋಗ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಇಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿಯ ಮುಂಭಾಗದಲ್ಲಿ ಬಿಬಿಎಂಪಿಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ , ಬಿಎಂಟಿಸಿಯ ಸಾಂಸ್ಕೃತಿಕ ಕಲಾ ಕುಟೀರದ ಕಲಾವಿದರು ಮತ್ತು ಕೆ ಎಸ್ ಆರ್ ಟಿ ಸಿಯ ಸಿಬ್ಬಂದಿ ಗಳು ಮತದಾನ ಸಂಕಲ್ಪ ಬೀದಿ ನಾಟಕ ವನ್ನು ಟಿಎಂ ಬಾಲಕೃಷ್ಣರವರ ನಿರ್ದೇಶನದಲ್ಲಿ ಪ್ರದರ್ಶನ ನೀಡಲಾಯಿತು.
ಮತದಾನ ಜಾಗೃತಿ ಜಾಥಾ, ಗಿಡ ನೆಡುವ ಕಾರ್ಯಕ್ರಮ , ಮತದಾನ ಮಾಡಲು ಪ್ರತಿಯೊಬ್ಬರು ಪ್ರತಿಜ್ಞೆ ಮಾಡುವ ಮೂಲಕ ವಿಶೇಷ ವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಜಿ ಸತ್ಯವತಿ ಭಾಆಸೇ, ಶ್ರೀ.ಜಯರಾಂ ರಾಯಪುರ ಭಾಆಸೇ, ವಿಶೇಷ ಆಯುಕ್ತರು, ( ಹಣಕಾಸು) ಬಿಬಿಎಂಪಿ, ಹಾಗೂ ಮಾನ್ಯ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು, ಶ್ರೀ. ಎ.ವಿ. ಸೂರ್ಯಸೇನ್, ಭಾಅಸೇ, ನಿರ್ದೇಶಕರು (ಮಾಹಿತಿ ತಂತ್ರಜ್ಞಾನ), ಬಿಎಂಟಿಸಿ, ಶ್ರೀಮತಿ ಲಕ್ಷ್ಮಿ ,ಡಿಸಿ, ದಕ್ಷಿಣ ವಲಯ ಬಿಬಿಎಂಪಿ, ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಮತದಾನ ನಮ್ಮೆಲ್ಲರ ಹಕ್ಕು ..ಮೇ ೧೦ ರಂದು ತಪ್ಪದೇ ಮತದಾನ ಮಾಡಿ, ಪ್ರಜಾಪ್ರಭುತ್ವದ ಹಬ್ಬದಲ್ಲಿ ಹೆಮ್ಮೆಯಿಂದ ಭಾಗಿಯಾಗಿ ಎಂಬ ಸಾಮಾಜಿಕ ಕಳಕಳಿಯ ಮತ್ತು ಜಾಗೃತಿ ಮೂಡಿಸಲಾಯಿತು.