ಬಿಎಂಟಿಸಿ ನಿರ್ವಾಹಕ ಜಿ.ಕೆ.ಪ್ರಕಾಶ್‌ರಿಗೆ ಅಭಿನಂದನೆ

ಕೋಲಾರ, ಆ.೩ : ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಚನದಂತೆ ಯಾವುದೇ ಕೆಲಸವಾಗಲಿ ಕಾಯಾ ವಾಚಾ ಮನಸಾ ಎಂದು ನಿಷ್ಢೆಯಿಂದ ಮಾಡಿದಾಗ ನೆಮ್ಮದಿ ಸಿಗುತ್ತದೆ ಮತ್ತು ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಕನ್ನಡಸಿರಿ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಗೂ ಕೋಲಾರ ತಾಲೂಕಿನ ಕಸಾಪದ ಗೌರವಾಧ್ಯಕ್ಷ ಟಿ.ಸುಬ್ಬರಾಮಯ್ಯ ಅಭಿಪ್ರಾಯಪಟ್ಟರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಠೆಯಲ್ಲಿ ನಿರ್ವಾಹಕರಾಗಿ ೨೯ ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ತಾಲೂಕಿನ ಗೌಡಹಳ್ಳಿ ಗ್ರಾಮದ ಜಿ.ಕೆ.ಪ್ರಕಾಶ್ ಅವರಿಗೆ ಸನ್ಮಾನಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಂಗಳೂರು ಕೆ.ಆರ್.ಪುರಂನ ಬಿ.ಎಂ.ಟಿ.ಸಿ.-೨೯ ರ ಘಟಕದ ಮುಖ್ಯ ವ್ಯವಸ್ಥಾಪಕ ಸತೀಶ್ ಮಾತನಾಡಿ, ಪ್ರತಿಯೊಬ್ಬ ಕಾರ್ಮಿಕರು ಸಂಸ್ಥೆಗೆ ನಿಷ್ಟೆಯಿಂದ ದುಡಿದಾಗ, ಸಂಸ್ಥೆಗೂ ಆದಾಯ ಬರುವುದರ ಜೊತೆಗೆ ನಾವುಗಳು ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಹಾಗೂ ಉತ್ತಮ ಸೇವೆಯನ್ನು ಸಲ್ಲಿಸಿದ ಜಿ.ಕೆ.ಪ್ರಕಾಶ್ ರವರು ಸಂಸ್ಥೆಯಲ್ಲಿ ಸತತವಾಗಿ ೨೯ ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದು ಅವರ ಉತ್ತಮ ನಡೆ ನಮ್ಮ ಎಲ್ಲಾ ಸಿಬ್ಬಂದಿಗೆ ಮಾರ್ಗದರ್ಶನವಾಗಲಿ ಎಂದರು.
ಈ ವೇಳೆ ಕಾರ್ಯಕ್ರಮದಲ್ಲಿ ಘಟಕ-೨೯ ರ ಸಿಬ್ಬಂದಿ ಹಾಗೂ ಕಾರ್ಮಿಕ ವರ್ಗ ಹಾಜರಿದ್ದರು.