ಬಿಇಓ ಮೇಲೆ ಹಲ್ಲೆ, ಖಂಡನೀಯ

ದೇವದುರ್ಗ,ಜೂ.೨೬-
ತಾಲೂಕಿನ ಜಾಲಹಳ್ಳಿ ಹೋಬಳಿಯಲ್ಲಿ ಹಮ್ಮಿಕೊಂಡಿರುವ ಅಡುಗೆ ಸಿಬ್ಬಂದಿಯವರ ಕಾರ್ಯಾಗಾರ ಕಾರ್ಯಕ್ರಮದಲ್ಲಿರುವಾಗ ಧೀಡಿರನೇ ಜೆಜೆ ಹಿರಿಯ ಪ್ರಾಥಮಿಕ ಶಾಲೆಯ ಒಳಗೆ ಪ್ರವೇಶಿಸಿ ಮನಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವ ಘಟನೆ ಯನ್ನು ಛಲವಾದಿ ಯುವ ಬ್ರಿಗೇಡ್ ಖಂಡಿಸುತ್ತದೆ ಎಂದು ತಾಲೂಕು ಅಧ್ಯಕ್ಷ ಬಸವರಾಜ ನಾಗರಾಳ ಹೇಳಿದರು .
ಅವರು ಪಟ್ಟಣದ ಸಂಜೆವಾಣಿ ಪತ್ರಿಕೆಯೊಂದಿಗೆ ಸೋಮವಾರ ಮಾತನಾಡುತ್ತಾ, ಕರ್ತವ್ಯ ದಲ್ಲಿ ನಿರತರಾದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಸುಕುದೇವರ ಮೇಲೆ ಹಲ್ಲೆ ಮಾಡಿರುವ ಶರಣು ಹುಣಸಗಿ ಮತ್ತು ಬಸವರಾಜ ವಕೀಲರು, ಹಾಗೂ ಅಯ್ಯನಗೌಡ ಗಚ್ಚಿನಮನಿ ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು , ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಅತ್ಯಂತ ಕ್ರಿಯಾ ಶೀಲರಾಗಿಕಾರ್ಯನಿರ್ವಾಹಿಸುತ್ತಿರುವ ಅಧಿಕಾರಿಯ ಮೇಲೆ ಮಾಡಿರುವ ಹಲ್ಲೆ ಖಂಡನಿಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಛಲವಾದಿ ಯುವ ಬಿಗ್ರೇಡ್ ನ ಪ್ರಭು ಹೇಮನಾಳ, ರಮೇಶ್ ಗಬ್ಬೂರ್, ಬಿ ನಾಗರಾಜ ಶಾವಂತಗೇರಾ, ಬಸವರಾಜ ಚಟ್ಟಿ, ಮೌನೇಶ್ ಜಿನ್ನಾಪುರ, ಸಿದ್ದಲಿಂಗಪ್ಪ ಕಾಕರಗಲ್, ಅಡಿವೆಶ್ ಹೆಗ್ಗಡದಿನ್ನಿ, ಬಸವಲಿಂಗಪ್ಪ ನಾಗವಂಶಿ, ಬಾಬು ಹೊನ್ನಟಗಿ, ಮಲ್ಲಿಕಾರ್ಜುನ ಹಳಿಮನಿ, ಮಂಜುನಾಥ್ ಹೆರುಂಡಿ ಇದ್ದರು.