ಬಿಇಓ ಕಚೇರಿ ಮುಂದೆ ಶಿಕ್ಷಕರ ಪ್ರತಿಭಟನೆ

ಮಾಲೂರು,ಮಾ.೧೧-ಪಿಎಫ್‌ಐ ಸಂಸ್ಥೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲು ೩೩ ಮಂದಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ೯ ತಿಂಗಳು ವೇತನ ನೀಡದೆ ವಂಚಿಸಿದ್ದಾರೆ ಪಿಎಫ್‌ಐ ಸಂಸ್ಥೆ ಹಾಗೂ ಶಿಕ್ಷಣ ಇಲಾಖೆಯ ವಿರುದ್ಧ ಪಟ್ಟಣದ ಬಿಇಓ ಕಚೇರಿಯ ಮುಂಭಾಗ ಅತಿಥಿ ಶಿಕ್ಷಕರು ಹಾಗೂ ನಾಗರೀಕ ಐಕ್ಯತಾ ರೈತ ಸೇವಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು
ಸ್ಥಳಕ್ಕೆ ಆಗಮಿಸಿದ ಬಿಇಓ ಚಂದ್ರಕಲಾ ಮಾತನಾಡಿ ಪಿಎಫ್‌ಐ ಸಂಸ್ಥೆಯವರು ಶಿಕ್ಷಣ ಇಲಾಖೆಯೊಂದಿಗೆ ಯಾವುದೇ ರೀತಿಯ ಅಗ್ರಿಮೆಂಟ್ ಮಾಡಿಕೊಂಡಿರಲಿಲ್ಲ ಪಿಎಫ್‌ಐ ಸಂಸ್ಥೆಯವರು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ವಂಚಿಸಿರುವ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ .
ಮಾನವೀಯತೆಯ ಹಿತದೃಷ್ಟಿಯಿಂದ ಕ್ಲಸ್ಟರ್‌ಗಳ ಮುಖ್ಯ ಶಿಕ್ಷಕರ ಸಭೆ ಕರೆದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರದಿಂದ ಅತಿಥಿ ಶಿಕ್ಷಕರಿಗೆ ಆರ್ಥಿಕ ಸಹಕಾರ ನೀಡಲಾಗುವುದು ಎಂದರು.