ಬಿಇಓಗೆ ಮೀಟಿಂಗ್ ಅಂದ್ರೆ ಆರಾಮಿರಲ್ವಾ – ಆಡಳಿತಾಧಿಕಾರಿ ವಿಜಯಕುಮಾರ್.

ಕೂಡ್ಲಿಗಿ.ಸೆ. 8 :- ಕೋವಿಡ್ ನಿಂದ ಸ್ವಲ್ಪ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಪುನರಾರಂಭಗೊಳ್ಳುತ್ತಿದ್ದು ಸರ್ಕಾರದ ಕೋವಿಡ್ ನಿಯಮ ಎಷ್ಟರ ಮಟ್ಟಿಗೆ ಮುಂಜಾಗ್ರತೆವಹಿಸಿ ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಏನು ಕ್ರಮ ಕೈಗೊಂಡಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಇರಲಿಲ್ಲ ಬಿಇಓ  ಬದಲಾಗಿ ಸಿಬ್ಬಂದಿ ಬಂದಿದ್ದು ಏನ್ರಿ ನಿಮ್ಮ ಬಿಇಓ ಎಲ್ಲಿ ಎಂದಾಗ ಆರಾಮಿಲ್ಲ ಸಾರ್ ಅವರಿಗೆ ಅಂದಾಗ ಮೀಟಿಂಗ್ ಅಂದ್ರೆ ನಿಮ್ಮ ಬಿಇಓ ಗೆ ಆರಾಮಿರಲ್ವ ಎಂದು ಕೂಡ್ಲಿಗಿ ತಾಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಎಂ ಆರ್ ವಿಜಯಕುಮಾರ ಆಕ್ರೋಶಗೊಂಡರು.                                      ಇವರು ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಬಿಇಓ ಬಗ್ಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ನಿರ್ಲಕ್ಷ್ಯರಾಗಿ ಸರ್ಕಾರದ ಸೇವೆ ಮಾಡಬಾರದು ಯಾವ ಸಭೆಗೂ ಸರಿಯಾಗಿ ಬಿಇಓ ರವರು ಭಾಗವಹಿಸುತ್ತಿಲ್ಲವೆಂದರು. 
ನಂತರ ಆರೋಗ್ಯ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಕೃಷಿ, ಜೆಸ್ಕಾಂ, ಕುಡಿಯುವ ನೀರು ನೈರ್ಮಲ್ಯ ಶುದ್ದೀಕರಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಉಳಿದ ಇಲಾಖೆಯ ಅನುದಾನ ಅದರ ಬಳಕೆ ಖರ್ಚು ವೆಚ್ಚಗಳು ಯಾವುದಕ್ಕೆ ಅನುಮೋದನೆ ಪಡೆಯುತ್ತೀರಿ ಎಷ್ಟರ ಮಟ್ಟಿಗೆ ಆ ಅನುಮೋದನೆ ಕಾರ್ಯ ನಡೆದಿದೆ ಮತ್ತು ನಡೆಯುತ್ತದೆ ಎಂಬುದರ ಬಗ್ಗೆ ಇಂಚಿಂಚು ಮಾಹಿತಿ ಪಡೆದು ಸರ್ಕಾರದ ಹಣದ ಲೆಕ್ಕ ಒಂದು ಪೈಸೆ ಪೋಲಾದರೂ ಅದಕ್ಕೆ ಸಂಬಂಸಿದಂತೆ ಕಾನೂನು ರೀತಿಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಆಡಳಿತಾಧಿಕಾರಿ ವಿಜಯಕುಮಾರ ಪ್ರತಿ ಅಧಿಕಾರಿಗಳಿಗೂ ಎಚ್ಚರಿಕೆಯ ಕಿವಿಮಾತು ಹೇಳಿದರು ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಜಿ ಎಂ ಬಸಣ್ಣ ಉಪಸ್ಥಿತರಿದ್ದರು. 
ಕೆಲ ಪಿಡಿಒ ಮತ್ತು ಕೆಲ ಅಧಿಕಾರಿಗಳ ಗೈರು ಎದ್ದು ಕಾಣುತಿತ್ತು