ಬಿಆರ್‍ಟಿ ಸ್ನೈಪರ್‍ಡಾಗ್ ಝಾನ್ಸಿ ಅಪಘಾತದಲ್ಲಿ ಸಾವು: ಗೌಪ್ಯವಾಗಿಟ್ಟ ಅರಣ್ಯ ಇಲಾಖೆ

ಚಾಮರಾಜನಗರ, ಜ.08:- ಬಿಆರ್‍ಟಿಯಲ್ಲಿ ಕಾಡುಗಳ್ಳರ ಪಾಲಿಗೆ ಸಿಂಹಸ್ವಪ್ನವಾಗಬೇಕಿದ್ದ, ಅರಣ್ಯ ಅಪರಾಧಗಳನ್ನು ಪತ್ತೆಹಚ್ಚಿ ಮಹಾನ್ ಪತ್ತೆದಾರಿ ಎನಿಸಿಕೊಳ್ಳಬೇಕಿದ್ದ ಸ್ನೈಪರ್‍ಡಾಗ್ ಝಾನ್ಸಿ ಡಿ.30 ರಅಪಘಾತದಲ್ಲಿ ಅಸುನೀಗಿದ್ದು ಅರಣ್ಯ ಇಲಾಖೆ ಮಾಹಿತಿ ಹೊರಗೆಡವದ ಪರಿಣಾಮತಡವಾಗಿ ಬೆಳಕಿಗೆ ಬಂದಿದೆ.
ಝಾನ್ಸಿ ಸತ್ತುಇಷ್ಟು ದಿನಗಳಾಗಿದ್ದರೂ ಅರಣ್ಯ ಇಲಾಖೆ ಮಾಹಿತಿಯನ್ನೇ ಬಹಿರಂಗಪಡಿಸಿಲ್ಲ. ಹೀಗಾಗಿ, ಝಾನ್ಸಿ ಸಾವಿನ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಪುಣಜನೂರುಕಚೇರಿಎದುರುಇರುವರಸ್ತೆಯಲ್ಲಿ ಬೀದಿನಾಯಿ ಅಟ್ಟಿಸಿಕೊಂಡು ಹೋದಝಾನ್ಸಿಗೆ ಲಾರಿಡಿಕ್ಕಿ ಹೊಡೆದು ಮೃತಪಟ್ಟಿದೆ. ಈ ಸಂಬಂಧ ಪೂರ್ವ ಪೆÇಲೀಸ್‍ಠಾಣೆಯಲ್ಲಿದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಸರ್ಕಾರೇತರ ಸಂಸ್ಥೆಯಾದ ಟ್ರಾಫಿಕ್ ಮತ್ತು ಡಬ್ಲುಡಬ್ಲುಎ-ಇಂಡಿಯಾ ವತಿಯಿಂದ ಚಂಡೀಗಢ ಇಂಡೋ-ಟಿಬೇಟಿನ್ ಬಾರ್ಡರ್ ಪೆÇಲೀಸ್ ಪೆÇೀರ್ಸ್ (ಐಟಿಬಿಪಿ)ನಲ್ಲಿ ಸುಮಾರು ಆರೇಳು ತಿಂಗಳು ಕಠಿಣತರಬೇತಿ ಪಡೆದು ಬಂದಿದ್ದಳು. ಇವಳನ್ನು ನೋಡಿಕೊಳ್ಳಲು ಅರಣ್ಯ ಇಲಾಖೆ ಗಾರ್ಡ್ ಬಸವರಾಜುಗೆ ಹ್ಯಾಂಡ್ಲರ್ ತರಬೇತಿಯನ್ನೂ ನೀಡಲಾಗಿತ್ತು.
ಝಾನ್ಸಿಗೆತರಬೇತಿಯಲ್ಲಿ ಬಾಂಬ್ ಪತ್ತೆ, ದುಷ್ಕರ್ಮಿಗಳು ಮತ್ತು ವಸ್ತುಗಳ ವಾಸನೆ ಗ್ರಹಿಸುವಿಕೆ, ಅಪರಾಧಿಗಳ ಬೆನ್ನತ್ತುವಚಾಣಾಕ್ಷತೆಯನ್ನು ಕಲಿಸಲಾಗಿತ್ತು. ಈ ತರಬೇತಿಯಲ್ಲಿ ಹಲವು ಶ್ವಾನಗಳು ಮತ್ತು ಹ್ಯಾಂಡ್ಲರ್ಸ್‍ಗಳನ್ನು ಸಿದ್ಧಪಡಿಸಲಾಗಿತ್ತು.
ಭಾರತೀಯರೈಲ್ವೆಯದಕ್ಷಿಣ ಮತ್ತು ಪಶ್ಚಿಮ ಮಧ್ಯಪ್ರದೇಶ, ಛತ್ತೀಸ್‍ಗಡ, ಒಡಿಶಾಅರಣ್ಯ ಇಲಾಖೆ, ಉತ್ತರಪ್ರದೇಶ, ಗುಜರಾತ್, ತಮಿಳುನಾಡು ಅರಣ್ಯ ಇಲಾಖೆಗೆ ಒಂದೊಂದು ಶ್ವಾನ ನೀಡಲಾಗಿತ್ತು. ಅದರಂತೆ, ಕರ್ನಾಟಕದಲ್ಲಿ ಬಿಆರ್‍ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆಝಾನ್ಸಿ ಸಿಕ್ಕಿದ್ದಳು. 2021ರ ನವೆಂಬರ್‍ನಲ್ಲಿಅರಣ್ಯ ಇಲಾಖೆ ಕಚೇರಿಗೆ ಬಂದಝಾನ್ಸಿ ಮುಂದೆ ಅಂದಿನ ಹುಲಿ ಯೋಜನೆ ನಿರ್ದೇಶಕ ಸಂತೋμïಕುಮಾರ್ ನಿಂತಿದ್ದರು. ಹ್ಯಾಂಡ್ಲರ್ ಸೂಚನೆ ಕೊಟ್ಟಕೂಡಲೇತನ್ನಗ್ರಹಿಕಾ ಶಕ್ತಿ ಪ್ರದರ್ಶಿಸಿ ಝಾನ್ಸಿ ಅಧಿಕಾರಿಗಳಿಗೆ ಗೌರವ ಸಲ್ಲಿಸಿದ್ದಳು. ಈ ವಿಡಿಯೋ ಇಂದಿಗೂ ಬಿಆರ್‍ಟಿಅರಣ್ಯಇಲಾಖೆಯಟ್ವಿಟರ್‍ನಲ್ಲಿದೆ. ದುರಂತವೆಂದರೆ ಕೆಲವು ದಿನಗಳ ಹಿಂದೆ ಮೃತಪಟ್ಟಝಾನ್ಸಿಗೆ ಸಂತಾಪ ಸಲ್ಲಿಸುವಒಂದೇಒಂದು ಪೆÇೀಸ್ಟ್‍ಕೂಡಅಪೆÇ್ಲೀಡ್‍ಆಗಿಲ್ಲ.
ಭವಿಷ್ಯದ ಭರವಸೆಯಾಗಿದ್ದ ಝಾನ್ಸಿ :
ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ರಾಣಾ ಕಳ್ಳ ಬೇಟೆಗಾರರ ಪಾಲಿಗೆ ಸಿಂಹಸ್ವಪ್ನವಾಗಿತ್ತು. ಹಲವು ಕ್ಲಿಷ್ಟಕರಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಿತ್ತು. ಕಳ್ಳ ಬೇಟೆಗಾರರನ್ನು ಬಂಧಿಸಲು ನೆರವಾಗಿತ್ತು. ವನ್ಯಮೃಗಗಳ ಸೆರೆಕಾರ್ಯಾಚರಣೆಯಲ್ಲೂ ಭಾಗವಹಿಸಿ ತನ್ನಚಾಣಾಕ್ಷತೆತೋರಿತ್ತು. ನಿವೃತ್ತಿಅಂಚಿನಲ್ಲಿದ್ದರೂರಾಣಾ ಸೇವೆ ಸಲ್ಲಿಸಿತ್ತು.
ಇದರಂತೆಯೇ ಬಿಆರ್‍ಟಿಯಲ್ಲಿ ಝಾನ್ಸಿ ಭವಿಷ್ಯದ ಭರವಸೆಯಾಗಿತ್ತು. ಈ ಅರಣ್ಯಕ್ಕೆ ಈವರೆಗೂತರಬೇತಿ ಪಡೆದ ಶ್ವಾನಗಳಿರಲಿಲ್ಲ. ಇದೇ ಮೊದಲ ಬಾರಿಗೆಝಾನ್ಸಿ ಆಗಮಿಸಿತ್ತು. ಬಿಆರ್‍ಟಿಗೆ ಶ್ವಾನಬಲ ಬಂದಿತ್ತು. ಝಾನ್ಸಿ ಇನ್ನೂ ಯಾವುದೇ ಕಾರ್ಯಾಚರಣೆಗೆ ಇಳಿದಿರಲಿಲ್ಲ. ಅಷ್ಟರಲ್ಲೇಅಪಘಾತದಲ್ಲಿ ಮೃತಪಟ್ಟಿದೆ.