ಬಿಂದಿಗೆ ಹಿಡಿದು ವಾಟಾಳ್ ಮತಯಾಚನೆ

ಚಾಮರಾಜನಗರ, ಮೇ.05:- ವಾಟಾಳ್ ನಾಗಾರಾಜ್ ಅಂದರೆವಿಶಿಷ್ಠ ಅವರ ಕಾರ್ಯವೈಖರಿಯು ಸಹ ವಿಭಿನ್ನ.ಅದರಂತೆ ಇಂದು ಸಹ ನಗರದ ಭುವನೇಸ್ವರಿ ವೃತ್ತದ ಬಳಿ ಇರುವ ಭುವನೇಶ್ವರಿ ನಾಮಫಲಕದ ಬಳಿ ಕಾವೇರಿ ನೀರು ತುಂಬಿದ ಬಿಂದಿಗೆ ಹೊತ್ತುಕೊಂಡು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ವಿಭಿನ್ನವಾಗಿ ಮತಯಾಚನೆ ಮಾಡಿದರು.
ಇದೇ ನೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರದ ಜನತೆ ಕುಡಿಯುವ ನೀರಿಗಾಗಿ ಪರದಾಡುತ್ತಿರುವಾಗ ಕಾವೇರಿ ನೀರು ತಂದವನು ನಾನು. ಅದಕ್ಕಾಗಿ ಪಟ್ಟ ಪರಿಶ್ರಮ ಭಗೀರಥ ಪ್ರಯತ್ನವೇ ಅಯಿತು.
ಜಿಲ್ಲಾ ಕೇಂದ್ರ ಮಾಡುವಾಗ ಅನೇಕ ಅಡೆತಡೆಗಳನ್ನು ಎದುರಿಸಬೇಕಾಯಿತು. ಆದರೂ ಛಲ ಬಿಡದೆ ಚಾಮರಾಜನಗರ ಜಿಲ್ಲೆ ಮಾಡಿಸಿದೆ.
ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಕ್ರೀಡಾಂಗಣ ಮಂಜೂರು ಮಾಡಿಸಿದೆ.ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಿಸಿದೆ
ಇμÉ್ಟಲ್ಲಾ ಅಭಿವೃದ್ಧಿ ಕಾರ್ಯಗಳು ನನ್ಬ ಅವಧಿಯಲ್ಲಿಯೇ ಆದರೂ ಸಹ ಜನತೆ ನನ್ನನ್ನು ಆಯ್ಕೆ ಮಾಡಲಿಲ್ಲ.ಈಗಲಾದರೂ ಸಹ ಚಾಮರಾಜನಗರ ಜನತೆ ನನಗೆ ಪ್ರಾಮಾಣಿಕವಾಗಿ ಮತ ಹಾಕುವ ಮೂಲಕ ನನ್ನನ್ನು ಆಯ್ಕೆ ಮಾಡಲಿ ಎಂದು ಮನವಿ ಮನವಿ ಮಾಡಿದರು.
ನಂತರ ತೆರೆದ ವಾಹನದಲ್ಲಿ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ಆಟೋಗಳ ಮೆರವಣಿಗೆ ನಡೆಸಿ ಮತ ಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಹುಂಡಿ ಬಸವಣ್ಣ, ಬಸಪ್ಪನಪಾಳ್ಯ ಕುಮಾರ, ಗೋಪಾಲನಾಯ್ಕ, ವರದನಾಯ್ಕ, ವಡ್ಡರಹಳ್ಳಿ, ಪಣ್ಯದಹುಂಡಿ ರಾಜು, ಚಾ.ರಂ. ಶ್ರೀನಿವಾಸಗೌಡ, ಸಂಜು, ರಾವತ್, ಶಿವಲಿಂಗಮೂರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.