ಬಾ ಹಾಡಿ ಕುಣಿಯೋಣದ ಆಡಿಷನ್

ಕಲಬುರಗಿ:ಜೂ.5: ನಗರದ ರಘೂಜಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಜೂನಿಯರ್ ಕಾಲೇಜಿನಲ್ಲಿ ಇಂದು ಬಾ ಹಾಡಿ ಕುಣಿಯೋಣ ತಂಡದ ವತಿಯಿಂದ ಮಹಾ ಆಡಿಷನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ರಘೋಜಿ ಶಾಲೆಯ ಸಂಸ್ಥಾಪಕಿ ಕುಮಾರಿ ನಂದಿನಿ. ಹಾಗೂ ಜೂನಿಯರ್ ಕಾಲೇಜಿನ ಪ್ರಾಚಾರ್ಯರಾದ ಮಲ್ಲಿಕಾರ್ಜುನ್ ಕಿಣ್ಣಿ ಶ್ರೀ ದಾಮೋದರ್ ರಘೋಜಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಶ್ರೀ ಪ್ರಮೋದ್ ಮಾಳೇಕರ್ ಬಾ ಹಾಡಿ ಕುಣಿಯೋಣ ಸೀಸನ್ ಫಸ್ಟ್ ಇದರ ವಿಜೇತಳಾದ ಕುಮಾರಿ ಸೃಷ್ಟಿ ರಾಘವೇಂದ್ರ ಮುದಗಲ್ ಹಾಗೂ ಶ್ರೀಮತಿ ಸವಿತಾ ಹಿರೇಮಠ್ ನಿರ್ಣಾಯಕ ರಾಗಿ ಕಾರ್ಯನಿರ್ವಹಿಸಿದರು ಕಾರ್ಯಕ್ರಮದ ಆಯೋಜಕರಾದ ಶಿವಕುಮಾರ್ ಬಿರಾದರ್ ಹಾಗೂ ಶ್ರೀ ಜೈ ಸಿಂಗ್ ಜಾದವ್ ಭಾಗವಹಿಸಿ ಎಲ್ಲಾ ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು