ಬಾಹುಬಲಿ ಸ್ವಾಮಿ ಸಚಿತ್ರ ದರ್ಶನ ಕೃತಿ ಲೋಕಾರ್ಪಣೆ

ಕಲಬುರಗಿ ನ 12:ಸಮಾಜದಲ್ಲಿ ಸಾಮರಸ್ಯ ಸಹಬಾಳ್ವೆಮೂಡಿಸುವುದು ಇಂದಿನ ಅಗತ್ಯವಾಗಿದ್ದು, ಮನಸ್ಸುಗಳನ್ನುಬೆಸೆಯುವ ಕೆಲಸ ನಿರಂತರವಾಗಿ ನಡೆಯಬೇಕಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ವೀರೇಂದ್ರ ಹೆಗಡೆಯವರು ನುಡಿದರು.
ಸಂಶೋಧಕಡಾ.ಅಜೀತ ಮುರಗುಂಡೆಯವರಸಂಪಾದಕತ್ವದಲ್ಲಿ ಹೊರಬಂದಿರುವ ನಾಡಿನ ಸಮಗ್ರ ಬಾಹುಬಲಿಸ್ವಾಮಿಯ ಚಿತ್ರ ಸಹಿತ ಪರಿಚಯದ ಶ್ರೀ ಬಾಹುಬಲಿ ಸ್ವಾಮಿಯ ಸಚಿತ್ರ ದರ್ಶನ ಕೃತಿ ಲೋಕಾರ್ಪಣೆ ಮಾಡಿ ಅವರು ಆಶೀರ್ವಚನ ನೀಡಿದರು.
ಇಂದಿನ ಕಲುಷಿತ ವಾತಾವರಣ ಮರೆಯಾಗಿಸಾಮರಸ್ಯದ ತಂಗಾಳಿ ಬೀಸಬೇಕಾಗಿದ್ದು ಭಯ, ಆತಂಕ ನಿವಾರಣೆಯಾಗಿ ನೆಮ್ಮದಿ ಜೀವನಕ್ಕಾಗಿ ಸುಂದರ ಸಮಾಜಕ್ಕಾಗಿ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ ಎಂದು ಡಾ.ಹೆಗಡೆಯವರು ಕರೆ ನೀಡಿದರು.ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯಪಾಟೀಲ ರೇವೂರ ಅಧ್ಯಕ್ಷತೆ ವಹಿಸಿದರು. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ,ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕಸುರೇಶ ತಂಗಾ, ಜೈನ ಸಮಾಜದ ಹಿರಿಯ
ಮುಖಂಡರಾದ ದೀಪಕ ಪಂಡಿತ, ಅರಿಹಂತ ಪಾಟೀಲ, ರಾಜಕುಮಾರಕಿವಡೆ ಉಪಸ್ಥಿತರಿದ್ದರು. ಭಾರತೀಯ ಜೈನ್ ಮಿಲನ ಜಿಲ್ಲಾಘಟಕದ ಅಧ್ಯಕ್ಷ ರಾಜೇಂದ್ರ ಕುಣಚಗಿ ಸ್ವಾಗತಿಸಿದರು.ನಾಗಲಿಂಗಯ್ಯ ಮಠಪತಿ ನಿರೂಪಿಸಿದರು, ರಮೇಶ ಬೆಳಕೇರಿ ವಂದಿಸಿದರು.ಈ ಸಂದರ್ಭದಲ್ಲಿ ಅನೀಲ ಭಸ್ಮೆ, ಮಹಾದೇವ ಗಂವಾರ,ಅಂಬಾರಾಯ ಬೆಳಕೋಟಿ, ಗುರುರಾಜ ಕುಲಕರ್ಣಿ ನಾಗೂರ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.