ಬಾವೂರ ಗ್ರಾ.ಪಂ ಬಿಜೆಪಿ ಮಡಲಿಗೆ ಅಧ್ಯಕ್ಷರಾಗಿ ಶಾರದಾ ಉಪಾಧ್ಯಕ್ಷರಾಗಿ ಮಲ್ಲನಗೌಡ ಆಯ್ಕೆ

ತಾಳಿಕೋಟೆ:ಆ.3: ತಾಲೂಕಿನ ಬಾವೂರ ಗ್ರಾಮದ ಗ್ರಾಂ ಪಂಚಾಯ್ತಿಯ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕುರಿತು ಬುಧವಾರರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಮತಿ ಶಾರದಾ ಮಲ್ಲಿಕಾರ್ಜುನ ಹಡಪದ ಉಪಾಧ್ಯಕ್ಷರಾಗಿ ಮಲ್ಲನಗೌಡ ಶರಣಪ್ಪಗೌಡ ಬಿರಾದಾರ ಅವರು ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಶಾರದಾ ಮಲ್ಲಿಕಾರ್ಜುನ ಹಡಪದ, ಮತ್ತು ಶ್ರೀಮತಿ ಶಿವಬಾಯಿ ಗುರಣ್ಣ ಮೇಟಿ ಅವರು ನಾಮ ಪತ್ರ ಸಲ್ಲಿಸಿದರು. ಚುನಾವಣೆಯಲ್ಲಿ ಶಾರದಾ ಹಡಪದ ಅವರು 8 ಮತಗಳನ್ನು ಪಡೆದರೆ ಶಿವಬಾಯಿ ಮೇಟಿ ಅವರು 8 ಮತಗಳನ್ನು ಪಡೆದುಕೊಂಡು ಸಮಭಲ ಸಾಧಿಸಿದರು. ಹೀಗಾಗಿ ಚುನಾವಣಾಧಿಕಾರಿಗಳು ನಡೆಸಿದ ಚೀಟಿ ಎತ್ತುವ ಮೂಲಕದ ಪ್ರಕ್ರೀಯೇಯಲ್ಲಿ ಶಾರದಾ ಹಡಪದ ಅವರ ಚೀಟಿ ಬಂದಿದ್ದರಿಂದ ಶಾರದಾ ಹಡಪದ ಅವರು ಆಯ್ಕೆಗೊಂಡಿದ್ದಾರೆಂದು ಘೋಷಿಸಲಾಯಿತು.

ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲನಗೌಡ ಬಿರಾದಾರ ಮತ್ತು ಶಿವಣ್ಣ ಕಾಮರಡ್ಡಿ ಅವರು ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಮಲ್ಲನಗೌಡ ಬಿರಾದಾರ ಅವರಿಗೆ 8 ಮತಗಳು ಬಿದ್ದರೆ ಶಿವಣ್ಣ ಕಾಮರಡ್ಡಿ ಅವರಿಗೆ 7 ಮತಗಳು ಬಿದ್ದಿದ್ದವು ಒಂದು ಮತ ತಿರಕೃತಗೊಂಡಿದ್ದರಿಂದ ಮಲ್ಲನಗೌಡ ಬಿರಾದಾರ ಅವರು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಾಪಂ ಇಓ ಬಸವಂತ್ರಾಯಗೌಡ ಬಿರಾದಾರ ಅವರು ಘೋಷಿಸಿದರು.

ಒಟ್ಟು 16 ಜನ ಸದಸ್ಯರ ಬಲಹೊಂದಿರುವ ಬಾವೂರ ಗ್ರಾಂಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು. ಚುನಾವಣಾ ಸಹಾಯಕರಾಗಿ ಅಭಿವೃದ್ದಿ ಅಧಿಕಾರಿ ಶ್ರೀಮತಿ ರಾಜಶ್ರೀ ದೇವೂರ ಕಾರ್ಯನಿರ್ವಹಿಸಿದರು.

ವಿಜಯೋತ್ಸವ

ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರ ನೇತೃತ್ವದಲ್ಲಿ ಆಯ್ಕೆಗೊಂಡ ನೂತನ ಅಧ್ಯಕ್ಷೆ ಶ್ರೀಮತಿ ಶಾರದಾ ಹಡಪದ ಮತ್ತು ಉಪಾಧ್ಯಕ್ಷ ಮಲ್ಲನಗೌಡ ಬಿರಾದಾರ ಅವರು ಬೆಂಬಲಿಗರೊಂದಿಗೆ ಗುಲಾಲ್ ಎರಚಿ, ಪಟಾಕ್ಷೀ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ಸಮಯದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಸದಸ್ಯರುಗಳಾದ ಸಿದ್ದನಗೌಡ ಪಾಟೀಲ, ಶ್ರೀಮತಿ ರೇಣುಕಾ ಬಡಿಗೇರ, ಬೋಮ್ಮಲಿಂಗಪ್ಪ ಖೈರೋಡಗಿ, ಶ್ರೀಮತಿ ಚನ್ನಮ್ಮ ಹಿರೇಮಠ, ಶ್ರೀಮತಿ ಮರಲಿಂಗವ್ವ ಮೇಟಿ, ಶ್ರೀಮತಿ ದೇವಮ್ಮ ಮಾದರ, ಮೊದಲಾದವರು ಪಾಲ್ಗೊಂಡಿದ್ದರು.