ಬಾವಿಯಲ್ಲಿ ವೃದ್ಧನ ಮೃತದೇಹ ಪತ್ತೆ

ಅಜೆಕಾರು, ಮಾ.1೬- ಹೆರ್ಮುಂಡೆ ಗ್ರಾಮದ ತೆಂಕಬೆಟ್ಟು ಎಂಬಲ್ಲಿ ಮಾ.14ರಂದು ಮಧ್ಯಾಹ್ನ ಬಾವಿಯಲ್ಲಿ ಸ್ಥಳೀಯ ನಿವಾಸಿ ಸದಾನಂದ ನಾಯಕ್(75) ಎಂಬವರ ಮೃತದೇಹ ಪತ್ತೆಯಾಗಿದೆ.

ಇವರು ಮಾ.13ರಂದು ಸಂಜೆ ಮನೆಯಿಂದ ಯಕ್ಷಗಾನಕ್ಕೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದರು. ಇವರ ಮೃತದೇಹ ಬಾವಿಯಲ್ಲಿ ಮತ್ತು ಅವರು ಬಳಸುತ್ತಿದ್ದ ಚಪ್ಪಲಿ, ಬೈರಾಸುಗಳು ಬಾವಿ ನೀರಿನಲ್ಲಿ ಕಂಡು ಬಂದಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.