ಬಾವಿಯಲ್ಲಿ ಬಿದ್ದ ಹಸುವಿನ ರಕ್ಷಣೆ

ಸುರಪುರ:ನ.10: ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಸಮೀಪವಿರುವ ನಾಕೇನ ಬಾವಿಯಲ್ಲಿ ಬಿದ್ದು ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದ ಹಸುವನ್ನು ರಕ್ಷಿಸಲಾಗಿದೆ.

ಮೇಯಲು ಹೋಗಿದ್ದ ವೇಳೆ ತನಗರಿವಿಲ್ಲದೆ ಬಾವಿಯಲ್ಲಿ ಹಸುವೊಂದು ಬಿದ್ದು ಹೊರಳಾಡುತ್ತಿತ್ತು, ಬಾವಿಯೂ ಅನೇಕ ತ್ಯಾಜ್ಯ ವಸ್ತುಗಳಿಂದ ಕೂಡಿದ್ದು ಹಸು ಹೊರ ಬರಲಾಗದೆ ಪರದಾಡುತ್ತಿತ್ತು, ಇದನ್ನು ಗಮನಿಸಿದ ಯುವಕರ ತಂಡ ಹಸುವನ್ನು ಜೀವಂತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ, ಯುವಕರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾವಿ ಸ್ವಚ್ಛಗೊಳಿಸಲು ಸ್ಥಳಿಯರ ಆಗ್ರಹ: ನಾಕೇನ ಬಾವಿಯು ಪುರಾತನ ಬಾವಿಯಾಗಿದ್ದು ಐತಿಹಾಸಿಕ ಇತಿಹಾಸ ಹೊಂದಿರುವ ಬಾವಿಗಳಲ್ಲಿ ಒಂದಾಗಿದೆ, ಆದರೆ ಸ್ಥಳಿಯ ನಗರಸಭೆಯ ನಿರ್ಲಕ್ಷ್ಯದಿಂದ ಬಾವಿಯು ತ್ಯಾಜ್ಯ ವಸ್ತುಗಳ ತಿಪ್ಪೆಯಾಗಿದೆ, ಕೂಡಲೇ ಬಾವಿಯಲ್ಲಿನ ತ್ಯಾಜ್ಯವನ್ನು ಸ್ವಚ್ಛಗೊಳಿಸಬೇಕು.
ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಬಾವಿಗೆ ತಡೆಗೋಡೆ ನಿರ್ಮಾಣ ಮಾಡುವಂತೆ ಸ್ಥಳಿಯರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಘವೇಂದ್ರ , ವಾಸುದೇವ , ಸಚಿನ ಕುಮಾರ ನಾಯಕ ,ಮಂಜುನಾಥ ಪ್ಯಾಪ್ಲಿ , ನಾಗರಾಜ , ಹರೀಶ ಸೇರಿದಂತೆ ಸ್ಥಳೀಯರು ಇದ್ದರು.