ಬಾವಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಬೈಂದೂರು, ಎ.1೮- ವಿದ್ಯಾರ್ಥಿನಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ಬೆಳಗಿನ ಜಾವ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಉಪ್ಪುಂದ ಗ್ರಾಮದ ರಕ್ಷಿತಾ(22) ಎಂದು ಗುರುತಿಸಲಾಗಿದೆ. ಉದ್ಯಾವರದ ಆಯುರ್ವೇದಿಕ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಇ ಎಂಎಸ್ ವ್ಯಾಸಂಗ ಮುಗಿಸಿ ಒಂದು ವಾರದ ಹಿಂದೆ ಮನೆಗೆ ಬಂದಿದ್ದ ರಕ್ಷಿತಾ, ನಿನ್ನೆ ನಸುಕಿನ ವೇಳೆ 1:30ಕ್ಕೆ ಬಿಇಎಂಎಸ್ ಅಂತಿಮ ವರ್ಷದ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಮನೆಯವರೊಂದಿಗೆ ಸೇರಿ ನೋಡಿದ್ದರು. ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿದ್ದ ರಕ್ಷಿತಾ, ಇದೇ ಕಾರಣಕ್ಕೆ ಮನನೊಂದು, ಮನೆಯವರು ಮಲಗಿದ್ದ ವೇಳೆ ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.