ಬಾವಿಗೆ ಬಿದ್ದ ಜಿಂಕೆಮರಿ ರಕ್ಷಣೆ

ಭಾಲ್ಕಿ:ಜ.13:ಕುಡಿಯುವ ನೀರು ಅರಸಿಕೊಂಡು ಬಾವಿಗೆ ಬಿದ್ದಿದ್ದ ಜಿಂಕೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದ ಅಶೋಕ ನಾಗಪ್ಪ ಎಂಬುವರ ಜಮೀನಿನಲ್ಲಿದ್ದ ಬಾವಿಗೆ ಗುರುವಾರ ಸಂಜೆ ಜಿಂಕೆ ಮರಿ ಬಿದ್ದು ಒದ್ದಾಡುತ್ತಿತ್ತು.
ಈ ಮಾಹಿತಿ ತಿಳಿದ ಜಮೀನಿನ ಮಾಲೀಕ, ಗ್ರಾಮಸ್ಥರು ತಕ್ಷಣವೇಭಾಲ್ಕಿ ವಲಯ ಅರಣ್ಯ ಅಧಿಕಾರಿ ಪ್ರವೀಣಕುಮಾರ ಮೋರೆಗೆ ಕರೆ ಮಾಡಿ ಮಾಹಿತಿನೀಡಿದ್ದಾರೆ.
ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಸೋಪಾನ, ಅರ್ಜುನ, ಅಗ್ನಿಶಾಮಕ ಎಎಸ್ ಐ ಸುಭಾಷ ನೇತೃತ್ವದಲ್ಲಿ ಬಾವಿಗೆ ಬಿದ್ದ ಜಿಂಕೆಮರಿಯನ್ನು ಸುರಕ್ಷಿತವಾಗಿ ಹೊರ ತೆಗೆದು ರಕ್ಷಿಸಿದ್ದಾರೆ.
ನಂತರ ಜಿಂಕೆಮರಿಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.