ಬಾವಿಗೆ ಬಿದ್ದ ಆನೆಮರಿ

ಧರ್ಮಪುರಿ,ನ.೧೯- ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಾಲಕ್ಕೂಡು ಪಟ್ಟಣ ವ್ಯಾಪ್ತಿಯಲ್ಲಿ ಆನೆಮರಿಯೊಂದು ೫೦ ಅಡಿ ಆಳದ ಬಾವಿಗೆ ಬಿದ್ದು ತರಚಿದ ಗಾಯಗಳಿಂದ ನರಳುತ್ತಿರುವ ನಡುವೆಯೇ ಬಾವಿಯಿಂದ ಹೊರ ಬರಲು ಮಾಡುತ್ತಿದ್ದ ಚೀರಾಟ ನೋಡುಗರ ಮನಸ್ಸಿಗೆ ಸಂಕಟ ಸೃಷ್ಟಿಸಿತ್ತು.
ಭವಿಷ್ಯಃ ಆನೆಮರಿ ನೆಲಬಾವಿಯ ಇರುವನ್ನು ಕಾಣದೆ ತಪ್ಪಿ ಸುಮಾರು ೫೦ ಅಡಿ ಆಳದ ಬಾವಿದೆ ಬಿದ್ದಿದೆ. ಬೀಳುವ ವೇಳೆ ಮೈ-ಕೈ ಎಲ್ಲ ತರಚಿದ ಗಾಯಗಳಾಗಿದೆ. ಬಾವಿಯಲ್ಲಿ ನೀರಿಲ್ಲದೆ ತಳದಲ್ಲಿರುವ ಕೆಸರಿನಲ್ಲಿ ಆನೆಮರಿ ಸಿಲುಕಿದೆ.ಆದರೂ ಮೇಲೆ ಬರುವ ಪ್ರಯತ್ನವನ್ನು ನಿರಂತರವಾಗಿ ನಡೆಸಿದೆ.ಇದನ್ನು ನೋಡಿದ ಸ್ಥಳೀಯರು ಆನೆಮರಿಯ ಪರಿಸ್ಥಿತಿಗೆ ಮರುಕ ವ್ಯಕ್ತಪಡಿಸಿದ್ದಾರೆ.
ಪಂಚಪಲ್ಲಿ ಏಳಕುಂಬೂರಿನಲ್ಲಿ ಈ ಘಟನೆ ನಡೆದಿದ್ದು, ನೀರಿಲ್ಲದ ೫೦ ಅಡಿ ಆಳಕ್ಕೆ ಆನೆ ಮರಿ ಬಿದ್ದಿದೆ. ಬಾವಿಗೆ ಆನೆ
ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆನೆಯನ್ನು ಮೇಲೆತ್ತಲು ಎಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ.