ಬಾವಿಗೆ ಬಿದ್ದು ಸಹೋದರರ ಸಾವು

ವಿಜಯಪುರ ಏ 27: ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ತಾಳಿಕೋಟೆ ಬೈಪಾಸ್ ರಸ್ತೆ ಹತ್ತಿರದ ಬಾವಿಯಲ್ಲಿ ಬಾಲಕರಿಬ್ಬರು ಬಿದ್ದು ಮೃತಪಟ್ಟಿದ್ದಾರೆ.
ಮೃತ ಬಾಲಕರನ್ನು ಆಶ್ರಯ ಕಾಲೋನಿ ನಿವಾಸಿ ಸುನೀಲಹಡಪದ ಎಂಬವರ ಮಕ್ಕಳಾದ ಪ್ರೇಮನಾಥ (13), ಪುನೀತ್ (10) ಎಂದು ಗುರುತಿಸಲಾಗಿದೆ.
ಪ್ರೇಮನಾಥ, ಪುನೀತ್ ಈ ಬಾಲಕರಿಬ್ಬರು ಸಹೋದರರಾಗಿದ್ದು, ಆಟವಾಡುತ್ತ ಬಾವಿ ನೋಡಲು ಹೋದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಈ ಸುದ್ದಿ ತಿಳಿದ ಸ್ಥಳೀಯ ಅಗ್ನಿಶಾಮಕ ದಳದ ಠಾಣಾಧಿಕಾರಿ ಪ್ರವೀಣ ಸುಂಕದ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ,ಸಾರ್ವಜನಿಕರ ಸಹಕಾರದೊಂದಿಗೆ ಬಾಲಕರಿಬ್ಬರ ಮೃತದೇಹವನ್ನು ಹೊರತೆಗೆದ್ದು, ಸರ್ಕಾರಿ ಆಸ್ಪತ್ರೆಗೆ ಮರಣೋತ್ತರಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
ಈ ಸಂಬಂಧ ಮುದ್ದೇಬಿಹಾಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.