ಬಾವಿಗೆ ಬಿದ್ದಿದ್ದ ವ್ಯಕ್ತಿಯ ರಕ್ಷಣೆ

ಕಾರ್ಕಳ, ಎ.೫- ನಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀರಾಲು ಎಂಬಲ್ಲಿ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದ ಮಧ್ಯವಯಸ್ಕರೊಬ್ಬರನ್ನು ಕಾರ್ಕಳ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಸುರಕ್ಷಿತವಾಗಿ ಮೇಲಕ್ಕೆ ತೆಗೆದಿದ್ದಾರೆ.
ವಿಜಯಕುಮಾರ್ ಜೈನ್ (೬೨) ಘಟನೆಯಲ್ಲಿ ಬದುಕುಳಿದವರು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬಿ ಎಮ್ ಸಂಜೀವ, ದಪೆದಾರ್ ರೂಪೇಶ್, ಸಿಬ್ಬಂದಿ ಜಯ ಮೂಲ್ಯ, ಮನೋಹರ್ ಪ್ರಸಾದ್, ಮಹಮ್ಮದ ರಫೀಕ್, ಶಿವಯ್ಯ ಮಠಪತಿ ಭಾಗವಹಿಸಿದ್ದರು.