ಬಾವಿಗಳಿಗೆ ಬಿದ್ದಿದ್ದ ಜಿಂಕೆಗಳ ರಕ್ಷಿಣೆ

ಹನೂರು: ಜೂ.2: ಕಾಡಿನಿಂದ ಪಟ್ಟಣ ಹಾಗೂ ಪಟ್ಟಣದ ಹೊರ ವಲಯಕ್ಕೆ ಬಂದು ಆಕಸ್ಮಿಕವಾಗಿ ಎರಡು ಬಾವಿಗಳಿಗೆ ಬಿದ್ದಿದ್ದ ಜಿಂಕೆಗಳನ್ನು ಅಗ್ನಿಶಾಮಕದಳದ ಸಿಬ್ಬಂದಿಗಳು ಮೇಲಕ್ಕೆತ್ತಿ ರಕ್ಷಿಸಿರುವ ಕಂಡು ಬಂದಿದೆ.
ಹನೂರು ಪಟ್ಟಣದ ದೇವಾಂಗ ಬೀದಿಯ ಬಾವಿ ಹಾಗೂ ಪಟ್ಟಣದ ಹೊರ ವಲಯದ ಒಂಟಿ ಮಾಲಾಪುರ ಕೆರೆ ಪಕ್ಕದಲ್ಲಿರುವ ಅಭಿ ಎಂಬುವರ ತೋಟದಲ್ಲಿರುವ 60 ಅಡಿ ಬಾವಿಗೆ ತಲಾ ಒಂದೊಂದು ಜಿಂಕೆಗಳು ನೀರು ಆಹಾರ ಹರಸಿ ಬಂದು ಬಿದ್ದಿವೆ. ಈ ಬಗ್ಗೆ ಸ್ಥಳಿಯರು ಅಗ್ನಿಶಾಮಕದಳ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಎರಡು ಜಿಂಕೆಗಳನ್ನು ರಕ್ಷಿಸಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಜೆ.ಪಿ.ಮುನಿಶಾಂತ, ಚಾಲಕ ಗಿರೀಶ್, ನಾಗರಾಜು, ಮಾದೇಶ್, ಜಯಶೇಖರ್, ನಾಗೇಶ್, ಕಾರ್ತೀಕ್, ನಾಗರಾಜು(ಪಾಲಿ) ಪಾಲ್ಗೊಂಡಿದ್ದರು.