ಬಾವಗಿ: ಮಳೆಗಾಗಿ ವಿಶೇಷ ಪೂಜೆ

ಬೀದರ್: ಜೂ.9: ಮುಂಗಾರು ಹಂಗಾಮಿನಲ್ಲಿ ಸಮೃದ್ಧ ಮಳೆಯಾಗಲಿ ಎ0ದು ಪ್ರಾರ್ಥಿಸಿ ತಾಲ್ಲೂಕಿನ ಬಾವಗಿ ಗ್ರಾಮದ ಭದ್ರೇಶ್ವರ ಮಠದಲ್ಲಿ ಶನಿವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಶಿವನಾಮ ಜಪ, ದೇವರಿಗೆ ಶತ ರುದ್ರಾಭಿಷೇಕ, ಪಾಂಚಜನ್ಯ ಜಪ ಹಾಗೂ ಅಭಿಷೇಕ ಮಾಡಲಾಯಿತು.
ರಾಜ್ಯದ ಬಹುತೇಕ ಕಡೆ ಇನ್ನೂ ಮಳೆಯಾಗದ ಕಾರಣ ರೈತರು ಆತಂಕ ದಲ್ಲಿದ್ದು, ಉತ್ತಮ ಮಳೆಗಾಗಿ ಪ್ರಾರ್ಥಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಮಠದ ಶಿವಕುಮಾರ ಸ್ವಾಮೀಜಿ ತಿಳಿಸಿದರು.
ಗುರುನಾಥ,,ಕನಶೆಟ್ಟಿ ಸಂಜುಕುಮಾರ ಕನಶೆಟ್ಟಿ ನಾಗೇಶ್ ಕೋಳರ ರೇವಣಪ್ಪ ಗುರುಸ್ವಾಮಿ ಸೇರಿದಂತೆ ಮಹಿಳೆಯರು ಮಕ್ಕಳು ಇದ್ದರು.