ಬಾವಗಿ ಭದ್ರೇಶ್ವರ ಮಠದಲ್ಲಿ ಬೀದಿನಾಟಕ ಪ್ರದರ್ಶನ

ಬೀದರ್ :ಮೇ:19:ತಾಲುಕಿನ ಬಾವಗಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಬೀದಿ ನಾಟಕಕ್ಕೆ ಶನಿವಾರ ಚಾಲನೆ ನೀಡಲಾಯಿತು
ಭದ್ರೆಶ್ವರ ಮಠದ ಶ್ರೀ ಶಿವುಕುಮಾರ ಸ್ವಾಮಿಜಿ ಮಾತನಾಡಿ, ಪ್ರತಿ ಕುಟುಂಬ ಶೌಚಾಲಯ ಹೊಂದಬೇಕು. ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ರೋಗರುಜಿನಗಳಿಂದ ದೂರ ಇರಬಹುದು ಎಂದರು

ಸರಕಾರ ಜಾರಿಗೊಳಿಸಿರುವ ಸ್ವಚ್ಛಭಾರತ ಅಭಿಯಾನ ಯೋಜನೆಯ ರೂಪರೇಷೆಗಳನ್ನು ಬೀದಿ ನಾಟಕದ ಮೂಲಕ ವಿವರಿಸಲಾಯಿತು. ಇದರೊಂದಿಗೆ ಬಾಲ್ಯಮದುವೆಗಳ ತಡೆ, ಆರೋಗ್ಯ ಹಾಗೂ ನೈರ್ಮಲ್ಯದ ಮಹತ್ವ ಬಗ್ಗೆ ತಿಳಿವಳಿಕೆ ನೀಡಲಾಯಿತು ಕಲಾ ತಂಡಗಳು ಬೀದಿ ನಾಟಕ ಪ್ರದರ್ಶಿಸಿದರು.
ಗ್ರಾ.ಪಂ. ಅಧ್ಯಕ್ಷರಾದ ಶಾಂತವೀರ್ ಹಜರಗಿ ಸದಸ್ಯರಾದ ಸಂಗಮೇಶ್ ಹಜರಗಿ ಭದ್ರೆಶ್ವರ ಮಠದ ಶ್ರೀ ಶಿವುಕುಮಾರ ಸ್ವಾಮಿ ಕಾಶಿನಾಥ್ ಪಕ್ಕ ಗುಂಡಯ್ಯ ಸ್ವಾಮಿ ರೇವಣಪ್ಪ ಭದ್ರೆಣ್ಣ ಗ್ರಾಮಾಭಿವದ್ಧಿ ಯೋಜನೆಯ ತಾಲೂಕು ಅಧಿಕಾರಿಗಳು ಇದರು ಸಂಗಮೇಶ್ ಬಾಪುರ ಸಮನ್ವಯ ಅಧಿಕಾರಿ ಮಮತಾ , ಸೇವಾಪ್ರತಿನಿಧಿ ಗೀತಾ ನೆಲವಾಡ ಹಾಗೂ ಇತರರಿದ್ದರು.