ಬಾವಗಿ; ಭದ್ರೆಶ್ವರ ಸ್ವಾಮೀಜಿ ಪುಣ್ಯಸ್ಮರಣೆ

ಬೀದರ:ನ.24: ತಾಲ್ಲೂಕಿನ ಬಾವಗಿ ಗ್ರಾಮದ ಗುರು ಭದ್ರೇಶ್ವರ ದೇವಸ್ಥಾನದಲ್ಲಿ ಗುರು ಭದ್ರೇಶ್ವರ ಸ್ವಾಮಿಯ ಪುಣ್ಯಸ್ಮರಣೆ ಪ್ರಯುಕ್ತ ವಿಶೇಷ ಪೂಜೆ ನಡೆಸಲಾಯಿತು

ಪುಣ್ಯಸ್ಮರಣೆ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಗುರು ಭದ್ರೇಶ್ವರ ಗದ್ದುಗೆಗೆ ರುದ್ರ ಅಭಿಷೇಕ ಪೂಜೆ, ಕಾರ್ತಿಕ ಮಾಸದ ದೀಪ ಬೆಳಗುವ ಧ್ವಜಾರೋಹಣ, ರಾತ್ರಿ ಸಂಗೀತ ಕಾರ್ಯಕ್ರಮ ಜರುಗಿದವು.

ಪವಾಡ ಪುರುಷರೆಂದೇ ಪ್ರಸಿದ್ಧರಾಗಿದ್ದ ಭದ್ರೆಶ್ವರ ಸ್ವಾಮಿ ಬಾವಿಯಿಂದ ನೀರು ತೆಗೆದು ತುಪ್ಪ ಮಾಡಿದರು ಮತ್ತು ರೋಗದಿಂದ ಬಳಲುತ್ತಿದ್ದವರಿಗೆ ವಿಭೂತಿ ನೀಡಿ ರೋಗ ಗುಣಪಡಿಸಿದ ಕರುಣಾಮಯ, ಗ್ರಾಮಕ್ಕೆ ಯಾವುದೇ ಸಂಕಷ್ಟ ಬಂದರೂ ದೂರ ಮಾಡುವ ಪವಾಡ ಪುರುಷ. ಅಂತಹ ಮಹಾ ಪುರಷರ ಹುಟ್ಟಿದ ಗ್ರಾಮದಲ್ಲಿ ನಾವು ಜೀವಿಸಿರುವುದು ನಮ್ಮ ಪುಣ್ಯ ಎಂದು ಭದ್ರೆಶ್ವರ ಮಠದ ಶಿವಕುಮಾರ ಸ್ವಾಮಿ ಹೇಳಿದರು.

ಅವರ ಪುಣ್ಯಸ್ಮರಣೆಯ ದಿನವನ್ನು ಅದ್ದೂರಿಯಾಗಿ ಜಾತಿ, ಮತ. ಪಂಥವೆಂಬ ಭೇದವಿಲ್ಲದೆ ಆಚರಿಸಬೇಕು’ ಎಂದು ಗ್ರಾಮ ಪಂಚಾಯತಿಯ ಸದಸ್ಯ ಶಾಂತವೀರ್ ಹಜ್ಜರಗಿ ತಿಳಿಸಿದರು.

ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ರೇವಣ್ಣಪ್ಪ ಭದ್ರಣ್ಣ, ಚನ್ನಮಲ್ಲಪ್ಪ ಹಜ್ಜರಗಿ, ಗುಂಡಯ್ಯ ಸ್ವಾಮಿ, ಭದ್ರೆಯ್ಯ ಸ್ವಾಮಿ, ಶಾಂತಕುಮಾರ್ ಸ್ವಾಮಿ, ಶಿವಕುಮಾರ ಸ್ವಾಮಿ, ಗ್ರಾಮ ಪಂಚಾಯತಿಯ ಸದಸ್ಯರಾದ ಸಂಗಮೇಶ್ವರ, ಶಾಂತವೀರ ಹಜ್ಜರಗಿ, ರಾಜಕುಮಾರ ಮಡಿವಾಳ, ಸಂಗೀತ ಕಲಾವಿದರಾದ ಕಿರಣ್ ಹಿರೇಮಠ, ಬಸವರಾಜ ಪಾಟೀಲ ಹೊಸಳ್ಳಿ ಸೇರಿದಂತೆ ಇತರೆ ಗ್ರಾಮಸ್ಥರು ಉಪಸ್ಥಿತರಿದ್ದರು.