ಬಾವಗಿ ಗ್ರಾಮದ ಶ್ರೀ ಗುರು ಭದ್ರೇಶ್ವರ ಜಾತ್ರೆಯಲ್ಲಿ ಖೇಣಿ ಭಾಗಿ

ಬೀದರ್: ಎ.12:ತಾಲ್ಲೂಕಿನ ಬಾವಗಿ ಗ್ರಾಮದ ಗುರು ಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಬೀದರ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಅಶೋಕ ಖೇಣಿ ರವರು ಭಾಗವಹಿಸಿ ಕುಲದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು

ಈ ಸಂದರ್ಭದಲ್ಲಿ ಗುರು ಭದ್ರೇಶ್ವರ ಸಂಸ್ಥಾನದ ಶಿವಕುಮಾರ ಸ್ವಾಮಿ, ಭದ್ರಯ್ಯ ಸ್ವಾಮಿ,ಬಾಲಸಂಗಯ್ಯಾ ಸ್ವಾಮಿ, ಶಾಂತಕುಮಾರ ಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಗಳಾದ ಶ್ರೀಮತಿ ಮಿನಾಕ್ಷಿ ಸಂಗ್ರಾಮ, ಬ್ಲಾಕ್ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದ ಚಂದ್ರಶೇಖರ ಚನಶಟ್ಟಿ,, ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಲೋಕೇಶ ಕನಶಟ್ಟಿ, ಮುಖಂಡರಾದ ರೇವಣಪ್ಪ ಭದ್ರಣ, ಕಂಟೆಪ್ಪಾ ಹೋನ್ನೀಕೇರಿ, ಸಿದ್ದಾರೋಡ ಭಾಲ್ಕೆ, ಸೇರಿ ಅನೇಕರು ಉಪಸ್ಥಿತರಿದ್ದರು