ಬಾವಗಿ ಅಂಬಾಭವಾನಿ ಪಲ್ಲಕ್ಕಿ ಸರಳ ಉತ್ಸವ

ಬೀದರ: ನ.2: ತಾಲುಕಿನ ಬಾವಗಿ ಗ್ರಾಮದ ಅಂಬಾಭವಾನಿ ದೇವಸ್ಥಾನದಲ್ಲಿ ಶನಿವಾರ ಸಂಪ್ರದಾಯದಂತೆ ದೇವಿಯ ಪೂಜೆ ಆರತಿ ನೆರವೇರಿಸಿ ದೇವಿಯ ಪಲ್ಲಕ್ಕಿಯನ್ನು ಹೊತ್ತುಕೊಂಡು ಭದ್ರೆಶ್ವರ ಮಠದ ಶಿವಕುಮಾರ್ ಸ್ವಾಮಿ ಅವರು ಸಾಂಪ್ರದಾಯಿಕ ಆಚರಣೆಗೆ ಚಾಲನೆ ನೀಡಿದರು.
ಪ್ರತಿ ವರ್ಷ ಸೀಗಿ ಹುಣ್ಣಿಮೆಯಂದು ನಡೆಯುವ ಅಂಬಾಭವಾನಿ ದೇವಿಯ ಪಲ್ಲಕ್ಕಿ ಉತ್ಸವವನ್ನು ಈ ಬಾರಿ ಕೊರೊನಾ ವೈರಸ್ ಹರಡುವ ಆತಂಕದಿಂದ ಗ್ರಾಮಸ್ಥರಿಂದ ಶನಿವಾರ ಸರಳವಾಗಿ ಆಚರಿಸಲಾಯಿತು
ಪಲ್ಲಕ್ಕಿ ಉತ್ಸಾಹ ಪ್ರಮುಖ ರಸ್ತೆಗಳಲ್ಲಿ ಜೈ ಅಂಬೆ, ಜೈ ಜಗದಂಬೆ ಮಾತ್ ಜೈ ಶಿವಾಜಿ’ ಎಂಬ ಭಕ್ತರ ಜಯಘೋಷಗಳ ಹೇಳುತ್ತಾ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಪುಷ್ಪಾರ್ಚನೆ ಮಾಡಿ ರಂಗೋಲಿ ಹಾಕುವ ಮೂಲಕ ದೇವಿಗೆ ಭಕ್ತಿ ಸಮರ್ಪಿಸಿದರು
ಪಲ್ಲಕಿ ದೇವಸ್ಥಾನಕ್ಕೆ ತಲುಪುತ್ತಿದ್ದಂತೆ ಸಂಪ್ರದಾಯದಂತೆ ಶಂಕರ್ ಜಗದಾಳೆ ಅವರು ಮಂಗಳಾರುತಿ ಮೂಲಕ ಪಲ್ಲಕ್ಕಿಯನ್ನು ಸ್ವಾಗತಿಸಿ ಕೊಂಡರು
ಗ್ರಾಮದ ಪ್ರಮುಖರಾದ ಸಂತೋಷ್ ಜಗದಾಳೆ ರಾಜಕುಮಾರ್ ಮಡಿವಾಳ ಗಿರೀಶ್ ಅಡ್ವೋಕೇಟ್ ಸಂಗಮೇಶ್ ಹಜರಗಿ ಶಿವುಕುಮಾರ ಸ್ವಾಮಿ ಭದ್ರೆಯ ಸ್ವಾಮಿ ಬಸವರಾಜ್ ಹೊನ್ನಿಕೆರಿ ಭದ್ರಪ್ಪಾ ಶಿವಕುಮಾರ್ ಸತೀಶ್ ಝರಣಪ್ಪ ಜಗನ್ನಾಥ್ ರಾವ್ ಇನ್ನಿತರರು ಇದ್ದರು.