ಬಾವಗಿಯಲ್ಲಿ ಸಂಕ್ರಾಂತಿ ಹಬ್ಬ ಆಚರಣೆ

ಬೀದರ್:ಜ.16: ತಾಲ್ಲೂಕಿನ ಬಾವಗಿ ಗ್ರಾಮದ ಶ್ರೀ ಹನುಮಾನ್ ದೇವಸ್ಥಾನದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹನುಮಾನ್ ಮೂರ್ತಿಗೆ ಮಾಹರುದ್ರ ಅಭಿಷೇಕ ಸಲ್ಲಿಸಿ ಹೂವಿನಿಂದ ಅಲಂಕರಿಸಿ ನೈವಿದ ಸಮರ್ಪಿಸಲಾಯಿತು
ಸ್ನೇಹಿತರು ಸೇರಿ ಪರಸ್ಪರ ಎಳ್ಳು ಬೆಲ್ಲ ಹಂಚಿ ಸಂಭ್ರಮಿಸಿದರು
ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಿಗೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ ಎಂದು ಗುಂಡಯ್ಯಾ ಸ್ವಾಮಿ ನುಡಿದರು
ಬಳಿಕ ಮಾತನಾಡಿದ ಯುವ ಮುಖಂಡ ಲೊಕೇಶ ಕನಶಟ್ಟಿ ಸೂರ್ಯ ಪಥ ಬದಲಿಸುವ ಈ ಶುಭ ದಿನದಂದು ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಸಿಹಿ ಗೆಣಸು ಕಡಲೆಯ ಸಾರದಂಥ ಜೀವನ ನಿಮ್ಮದಾಗಲಿ, ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ಎಲ್ಲರ ಬಾಳು ಸಮೃದ್ಧವಾಗಲಿ ಎಂದೂ ಹೇಳಿದರು
ಈ ಸಂದರ್ಭದಲ್ಲಿ ಜಗನಾಥ ಚಿದ್ರೀ
ವಿಜಯ ಬಾಪೂರೆ, ದತ್ತಾತ್ರೀ ಹುಗಾರ,ಆನಂದ ಸ್ವಾಮಿ ಭಿಮಣ್ಣಾ ಪೆÇಶಟ್ಟಿ, ಬಾಬು ಅವಂಟಿ, ವಿಶಾಲ ಪಾಟೀಲ, ಭದ್ರೆಶ್ ಕೊಳಾರ, ರತಿಕಾಂತ ಸ್ವಾಮಿ, ಸೇರಿ ಅನೇಕರು ಉಪಸ್ಥಿತರಿದ್ದರು