ಬಾವಗಿಯಲ್ಲಿ ರೇಣುಕಾಚಾರ್ಯ ಜಯಂತಿ

ಬೀದರ್:ಮಾ.5: ತಾಲುಕಿನ ಬಾವಗಿ ಭದ್ರೆಶ್ವರ ಮಠದಲ್ಲಿ ರವಿವಾರ ವೀರಶೈವ ಸಮಾಜದ ವತಿಯಿಂದ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಭದ್ರೆಶ್ವರ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಕಲಿಯುಗದಲ್ಲಿ ಮಾನವನು ಆಸೆ,ಅಸೂಯೆಗಳನ್ನು ತೊಡೆದು ಹಾಕಿ ಸಮಾಜದ ಒಳಿತಿಗಾಗಿ ಬದುಕಬೇಕು. ಧರ್ಮವನ್ನು ರಕ್ಷಣೆ ಮಾಡುವವರು ನಾವು, ಆದರೆ ಧರ್ಮವೆ ನಮ್ಮನ್ನು ರಕ್ಷಣೆ ಮಾಡುವಂತ್ತ ಪರಿಸ್ಥಿತಿ ನಿರ್ಮಾಣವಾಗಿದೆ.ಜ್ಯೋತಿ ಸ್ವರೂಪಿಯಾದ ರೇಣುಕಾಚಾರ್ಯರು ಸಮಾಜ ಬದಲಾವಣೆಗೆ ಸಂದೇಶಗಳನ್ನು ನೀಡಿದ್ದಾರೆ. ಅವರ ಸಂದೇಶಗಳನ್ನು ಪಾಲಿಸುತ್ತ ಸಮಾಜದಲ್ಲಿ ಮೇಲು ಕೀಳು ಎನ್ನದೆ ಸಮಾನತೆಯಿಂದ ಬದುಕಬೇಕು ಎಂದರು.
ಎ,ಪಿ ಎಮ್,ಸಿ ಮಾಜಿ ಅಧ್ಯಕ್ಷರು ಚನ್ನಮಲ್ಲಪ್ಪ ಹಜರಗಿ ಮಾತನಾಡಿ, ಸರ್ಕಾರದ ವತಿಯಿಂದ ಜಗದ್ಗುರು ರೇಣುಕಾಚಾರ್ಯರರ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯರು ಶಾಂತವೀರ ಹಜರಗಿ ಚಂದಯ್ಯಾ ಸ್ವಾಮಿ,ಗುರು ಸ್ವಾಮಿ ಸಾಯಿಪ್ರಸಾದ್ ಬ್ಯಾಲಳ್ಳಿ ರಾಜುಕುಮಾರ ಪಾಟೀಲ ರೆವಣಪ್ಪ ಭದ್ರನೋರ ವಿಶ್ವಹ ಹಜರಗಿ ಶ್ರೀಕಾಂತ ಚಿದ್ರಿ ಕನಶೆಟಿ ವೀರೇಶ್ ಬಮುಣಿ ಇದ್ದರು.