ಬಾವಗಿಯಲ್ಲಿ ಬಸವ ಜಯಂತಿ ಆಚರಣೆ

ಬೀದರ್’:ಎ.24: ತಾಲುಕಿನ ಬಾವಗಿ ಬಸವಣ್ಣನವರ 918ನೇ ಜಯಂತಿ ಅಂಗವಾಗಿ, ಬಸವ ಸಂಘಟನೆಗಳ ಸಹಯೋಗದಲ್ಲಿ ರವಿವಾರ ಗ್ರಾಮದಲ್ಲಿ ಬಸವೇಶ್ವರ ವೃತ್ತದಲಿಯ ಬಸವಣ್ಣ ಮೂರ್ತಿಗೆ ಚನ್ನಮಲ್ಲಪ ಹಜರಗಿ ಮಾಲಾರ್ಪಣೆ ಮಾಡಿ ನಡೆದ ಬಸವೇಶ್ವರ ಹಾಗೂ ಶರಣರ ಭಾವಚಿತ್ರಗಳ ಮರವಣಿಗೆಗೆ ಭದ್ರೆಶ್ವರ ಮಠದ ಶಿವುಕುಮಾರ ಸ್ವಾಮೀಜಿ ಲಿಂಗಾಯತ ಪ್ರಗತಿಶೀಲ ಸಂಘದ ಚೆನ್ನಮಲ್ಲಪ್ಪ ಹಜರಗಿ ಚಾಲನೆ ನೀಡಿದರು.
ಮೆರವಣಿಗೆಯು ಬಸವೇಶ್ವರ ವೃತ್ತದಿಂದ ಆರಂಭಗೊಂಡು, ಬೊಮ್ಮಗುಂಡೇಶ್ವರ ವೃತ್ತ, ಹನುಮಾನ್ ಮಂದಿರ ವೆಂಕಟೇಶ್ವರ ದೇವಸ್ಥಾನ ಅಂಬೇಡ್ಕ ವೃತ್ತ, ಶಿವಾಜಿ ವೃತ್ತ, ಲಕ್ಷ್ಮೀ ದೇವಸ್ಥಾನ ಭದ್ರೆಶ್ವರ ಮಠದ ಮೂಲಕ ಮರಳಿ ಬಸವೇಶ್ವರ ಆವರಣಕ್ಕೆ ಬಂದು ಮುಕ್ತಾಯಗೊಂಡಿತು.
ಮೆರವಣಿಗೆಯಲ್ಲಿ ಗ್ರಾಮದ ಯುವಕರಿಂದ ನಂದಿಕೋಲ ಕುಣಿತ ಹಾಗೂ ವಿವಿಧ ವಾದ್ಯ ಮೇಳಗಳು ಭಾಗವಹಿಸಿ ಮೆರುಗು ತುಂಬಿದವು. ಬಸವಣ್ಣ ಡಿಜಿ ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿದು ಮೆರವಣಿಗೆ ಗಮನ ಸೆಳೆಯಿತು. ಬಸವ ಜಯ ಘೋಷ, ವಚನಗಳ ಘೋಷಣೆಗಳು ಮೊಳಗಿದವು.
ಲಿಂಗಾಯತ ಪ್ರಗತಿಶೀಲ ಸಂಘದ
ಶಾಂತವೀರ್ ರೇವಣಪ್ಪ ಮಾರುತಿ ಜಗನ್ನಾಥ್ ಸಂಗಮೇಶ್ ಮಡ್ಯಪ್ಪ ರಾಜಕುಮಾರ್ ಗುಂಡಯ್ಯ ಆನಂದ ಸ್ವಾಮಿ ಶಿವಶರಣಪ್ಪ ಸಿದ್ದು ಹೊನಕೇರಿ ಮಾರುತಿ ದಲಿತ ಸಂಘರ್ಷ ಸಮಿತಿ ಶಾಮಣ್ಣ ಶರಣಪ್ಪ ಬೆಲ್ದರ್ ಜಾಗತಿಕ ಲಿಂಗಾಯತ ಮಹಾಸಭೆ ಸಂಘದ ಪದಾಧಿಕಾರಿಗಳು, ಬಸವ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.