ಬೀದರ್:ಜೂ.12: ತಾಲ್ಲೂಕಿನ ಬಾವಗಿ ಭದ್ರೆಶ್ವರ ಮಠದಲ್ಲಿ ರವಿವಾರ ಪರಿಸರ ದಿನಾಚರಣೆ ಅಂಗವಾಗಿ ಭದ್ರೆಶ್ವರ ಸೇವಾಸಮಿತಿಯಿಂದ ಪರಿಸರ ಜಾಗೃತಿ ಮತ್ತು ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ಭದ್ರೆಶ್ವರ ಮಠದ ಶ್ರೀ ಶಿವುಕುಮಾರ ಸ್ವಾಮಿ ಮಾತನಾಡಿ, ಆರೋಗ್ಯಕರ ಜೀವನ ನಡೆಸಲು ಸ್ವಸ್ಥ ಪರಿಸರ ಅಗತ್ಯ. ಪ್ರತಿಯೊಬ್ಬರಿಗೂ ಶುದ್ಧ ಗಾಳಿ, ನೀರಿನ ಅವಶ್ಯಕತೆಯಿದೆ. ಹಾಗಾಗಿ ಪರಿಸರ ರಕ್ಷಣೆ ಎಲ್ಲರ ಹೊಣೆ. ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶಮಾಡುತ್ತಿದ್ದಾರೆ. ಎಲ್ಲರೂ ಪರಿಸರವನ್ನು ರಕ್ಷಿಸಬೇಕು ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಸಂಗಮೇಶ್ ಹಜರಗಿ ಮಾತನಾಡಿ ಬಾವಗಿ ಗ್ರಾಮ ಪಂಚಾಯಿತಿ ವತಿಯಿಂದ ಪರಿಸರ ದಿನಾಚರಣೆ ಪ್ರಯುಕ್ತ ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ಪರಿಸರ ಜಾಗೃತಿ ಮೂಡಿಸಲಾಗುವುದು. ಪರಿಸರ ದಿನಾಚರಣೆ ಸಂಕಲ್ಪವಾಗಿ ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪೆÇೀಷಿಸಬೇಕು ಎಂದು ಅವರು ಹೇಳಿದರು.
ಭದ್ರೆಶ್ವರ ಸೇವಾ ಸಮಿತಿಯ
ಗುಂಡಯ್ಯ ಸ್ವಾಮಿ ಭದ್ರಪ್ಪ ರಾಜಕುಮಾರ್ ಸ್ವಾಮೀ ಹಜರಗಿ ಶಾಮಣ್ಣ ಖೌದಿ ನಾಗೇಶ್ ಪ್ರಕಾಶ್ ಇಸ್ಮಾಯಿಲ್ ಸಂತೋಷ್ ಇತರರು ಇದ್ದರು.