ಬಾಳ್ವೆನಹಳ್ಳಿ ಘಟನೆ:ತಪ್ಪಿತಸ್ಥರಿಗೆ ಶಿಕ್ಷಿಸುವಂತೆ ಆಗ್ರಹ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಸೆ.22: ಇತ್ತೀಚೆಗೆ ಕೋಲಾರ ಜಿಲ್ಲೆ ಮಾಲೂರು ತಾಲೂಕು ಬಾಳ್ವೆನಹಳ್ಳಿ ಗ್ರಾಮದ ಗ್ರಾಮ ದೇವತೆಯ ಮೆರವಣಿಗೆಯ ಸಂದರ್ಭದಲ್ಲಿ ಬಾಲಕನ ಮೇಲೆ ನಡೆದ ದೌರ್ಜನ್ಯ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಟ್ಟಣದ ಹೋಬಳಿ ಘಟಕದ ಆಮ್ ಆದ್ಮಿ ಪಕ್ಷದ ಹೋಬಳಿ ಘಟಕದ ಅಧ್ಯಕ್ಷ ಜೋಗಿ ರೇವಣ್ಣ ನಾಡಕಾರ್ಯಾಲಯದ ಉಪತಹಶೀಲ್ದಾರೆ ಲಾವಣ್ಯರಿಗೆ ಮನವಿ ಪತ್ರ ಸಲ್ಲಿಸಿದರು.
ಕೋಲಾರ ಜಿಲ್ಲೆ ಬಾಳ್ವೆನಹಳ್ಲಿ ಗ್ರಾಮದ ದೇವರ ಗುದ್ದಿಕೋಲು ಮುಟ್ಟಿದ ಪರಿಶಿಷ್ಟ ಜಾತಿಯ ಬಾಲಕನ ಮೇಲೆ ದೌರ್ಜನ್ಯ ಎಸಗಿ ಆ ಬಾಲಕನಿಗೆ 60,000/- ರೂ. ದಂಡ ಹಾಕಿರುವುದೂ ಅಲ್ಲದೇ ಆ ಹಣವನ್ನು  ಅಕ್ಟೋಬರ್ 1ರ ಒಳಗೆ ಪಾವತಿಸದಿದ್ದರೆ ಕುಟುಂಬವನ್ನು ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಒಡ್ಡಲಾಗಿದೆ. ಭಾರತದಲ್ಲಿ ಸ್ವತಂತ್ರ ಬಂದು 25 ವರ್ಷವಾದರೂ ದಲಿತರ ಮೇಲೆ ಜರುಗುವ ಮೌಡ್ಯತೆಯ ಅಮಾನವಿಯ ಘಟನೆಗಳನ್ನು  ತಡೆಯುವಂತೆ ಆಗ್ರಹಿಸುವುದರ ಜೊತೆಗೆ ಈ ಅಮಾನವೀಯ ಕೃತ್ಯವನ್ನು  ಖಂಡಿಸಿದರು. ಸಂತ್ರಸ್ಥ ಕುಟುಂಬ ಹಾಗೂ ಗ್ರಾಮದವರಿಗೆ ನ್ಯಾಯಯುತವಾಗಿ ಕೂಡಲೇ ಶಿಕ್ಷೆ ಆಗಬೇಕೆಂದು ಮನವಿ ಸಲ್ಲಿಸಿದರು.
ನಂತರ ಪಕ್ಷಕ್ಕೆ ನೂತನ ಸದಸ್ಯರ ನೋಂದಣಿ ಕಾರ್ಯದ ಜೊತೆಗೆ ಗರಗ, ನಾಗಲಾಪುರ, ಬ್ಯಾಲಕುಂದಿ ಹಾಗೂ ಡಣನಾಯಕನಕೆರೆ ಗ್ರಾಮಗಳಲ್ಲಿ ಪಕ್ಷದ ಪ್ರಚಾರ ಕಾರ್ಯ ನಡೆಸಿದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಹ.ಬೊ.ಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದ ಆಕಾಂಕ್ಷಿ ಡಾ. ವಿ.ಹೆಚ್. ಹನುಮಂತಪ್ಪ, ಜಿಲ್ಲಾಧ್ಯಕ್ಷ ಜೆ.ಎನ್. ಕಾಳಿದಾಸ್, ಜಿ. ರವಿಕುಮಾರ, ನಿತಿನ್, ಸತೀಶ್, ಸಿದ್ದೇಶ್, ದುರ್ಗೆಶ್, ವೆಂಕಟೇಶ್ ಗೋಸಂಗಿ ಹಾಗೂ ಇತರರು ಇದ್ದರು.

Attachments area