ಬಾಳೆ ಕೃಷಿ ತರಬೇತಿ

ಕಲಬುರಗಿ,ಆ.10:ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ, ಕಿತ್ತೂರು ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿ, ಅಖಿಲ ಭಾರತೀಯ ಸಮನ್ವಯ ಸಂಶೋಧನಾ ಯೋಜನಾ ಹಣ್ಣುಗಳು, ಅರಭಾವಿ, ಭಾಕೃಅಪ-ಪರಿಶಿಷ್ಟ ಜಾತಿ ಉಪಯೋಜನೆ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಮತ್ತು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ “ಬಾಳೆ ಆಧುನಿಕ ಉತ್ಪಾಧನಾ ತಾಂತ್ರಿಕತೆಗಳು” ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ವಿಸ್ತರಣಾ ನಿರ್ದೇಶಕರಾದ ಡಾ. ಶಿವಶರಣಪ್ಪಾ ಗೌಡಪ್ಪ ರವರು ಬಾಳೆ ಎಲೆ, ಬಾಳೆ ಡಿಂಡು, ಬಾಳೆ ಉತ್ಪನ್ನಗಳನ್ನು ದೈನಂದಿನ ಜೀವನದಲ್ಲಿ ಅತ್ಯಂತ ಉಪಯುಕ್ತವಾಗಿದ್ದು; ಸಮತೋಲನಾ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ವೈಜ್ಞಾನಿಕ ತರಬೇತಿಯ ಉಪಯುಕ್ತ ಮಾಹಿತಿಯನ್ನು ಎಲ್ಲಾ ಬಾಳೆ ಬೆಳೆಗಾರರು ರೈತ ಉತ್ಪಾದಕರ ಸಂಘದ ಮೂಲಕ ಹಾಗೂ ಸಂಶೋಧನಾ ಕೇಂದ್ರದ ವಿಜ್ಞಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕೆಂದು ತಿಳಿಸಿದರು.
ಡಾ. ಎಮ್.ಜಿ ಕೆರುಟಗಿ, ಡೀನ್, ತೋಟಗಾರಿಕಾ ಮಹಾವಿದ್ಯಾಲಯ, ಅರಭಾವಿ ಇವರು ಮಾತನಾಡಿ ಬಾಳೆ ಮೌಲ್ಯವರ್ಧನೆ, ಉದ್ಯೋಗ ಅವಕಾಶಗಳು ಮತ್ತು ಪ್ರಸ್ತಕ ಬಾಳೆ ಕೃಷಿಯ ಅನುಕೂಲತೆಗಳನ್ನು ವಿವರಿಸಿದರು. ಅಧ್ಯಕ್ಷತೆಯನ್ನು ವಹಿಸಿದ ಡಾ. ಎಂ.ಎಂ. ಧನೋಜಿ, ಡೀನ್ (ಕೃಷಿ) ಕೃಷಿ ಮಹಾವಿದ್ಯಾಲಯ, ಕಲಬುರಗಿ ರವರು ಮಾತನಾಡಿ ರೋಗರಹಿತ ತಳಿಗಳ ಬಿಡುಗಡೆ ಮತ್ತು ವೈಜ್ಞಾನಿಕ ಬಾಳೆ ಬೇಸಾಯದ ಬಗ್ಗೆ ಮಾಹಿತಿ ಪಡೆದು ಕೃಷಿ ಮಾಡಲು ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ ಡಾ. ಬಿ.ಎಂ. ದೊಡಮನಿ, ಸಹ ಸಂಶೋಧನಾ ನಿರ್ದೇಶಕರು, ವಲಯ ಕೃಷಿ ಸಂಶೋಧನಾ ಕೇಂದ್ರ, ಕಲಬರಗಿ ರವರು ಮಾತನಾಡಿ ಸ್ಥಳೀಯ ಬಾಳೆ ತಳಿಯ ಸಂರಕ್ಷಣೆ ಮತ್ತು ಸಾವಯವ ಕೃಷಿ ಇಂದಿನ ಅತ್ಯಗತ್ಯ ಎಂದರು. ಎಐಸಿಆರ್‍ಪಿ-ಹಣ್ಣು ವಿಭಾಗ, ಅರಭಾವಿಯ ಮುಖ್ಯಸ್ಥರು ಹಾಗೂ ಸಸ್ಯರೋಗಶಾಸ್ತ್ರದ ಪ್ರಾಧ್ಯಾಪಕರಾದ ಡಾ. ವಿ. ಕಾಂತರಾಜು ರವರು ಪ್ರಾಸ್ತಾವಿಕವಾಗಿ ಮಾತನಾಡಿ ಬಾಳೆ ತಾಂತ್ರಿಕ ಮಾಹಿತಿ ಪಡೆದು ಯೋಜನೆ ಯಶಸ್ಸಿಗೆ ಕಾರಣರಾಗಬೇಕೆಂದರು. ಸೂಕ್ತ ತಳಿ ಹವಾಮಾನ ತಕ್ಕಂತೆ ಕೀಟ ರೋಗಗಳ ನಿರ್ವಹಣೆ, ಪರಿಸರ ಸ್ನೇಹಿ ಕೃಷಿ ತಾಂತ್ರಿಕತೆಗಳನ್ನು ಅನುಸರಿಸುವಂತೆ ತಿಳಿಸಿದರು.
ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ರಾಜು ತೆಗ್ಗಳ್ಳಿ ರವರು ಕಾರ್ಯಕ್ರಮವನ್ನು ವಂದಿಸಿದರು, ತೋಟಗಾರಿಕೆ ವಿಜ್ಞಾನಿಗಳಾದ ಡಾ. ವಾಸುದೇವ ನಾಯ್ಕ್ ರವರು ಬಾಳೆ ಬಳೆಯ ಮಾಹಿತಿ ಬಗ್ಗೆ ಉಪನ್ಯಾಸ ನೀಡಿದರು. ಸಾವಯವಗೊಬ್ಬರ, ತಳಿಯ ಆಯ್ಕೆ ಸಂಪರ್ಕ ತೋಟಗಾರಿಕಾ ನಿರ್ವಹಣಾ ಕ್ರಮಗಳನ್ನು ವಿವರಿಸಲಾಯಿತು. ಡಾ. ಜಹೀರ್ ಅಹೆಮದ್, ವಿಜ್ಞಾನಿ (ಸಸ್ಯರೋಗಶಾಸ್ತ್ರ) ರವರು ಕಾರ್ಯಕ್ರವನ್ನು ನಿರುಪಣೆ ಮಾಡಿದರು. ಕೃವಿ.ಮಾ.ವಿದ್ಯಾಲಯದ ಉಪನ್ಯಸಕರಾದ ಡಾ. ಮಹಾಂತೇಶ ಜೋಗಿ ರವರು ಸಂಸ್ಸರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿದರು. ಸ್ವಾಗತಿಸಿದರು. ಕೆವಿಕೆ ವಿಜ್ಞಾನಿಗಳಾದ ಡಾ. ಯುಸುಫ್‍ಅಲಿ ನಿಂಬರಗಿ, ವಿಜ್ಞಾನಿ (ಬೇಸಾಯಶಾಸ್ತ್ರ) ಡಾ. ಶ್ರೀನಿವಾಸ ಬಿ.ವಿ, ವಿಜ್ಞಾನಿ (ಮಣ್ಣು ವಿಜ್ಞಾನ) ವಿಜ್ಞಾನಿಗಳಾದ ಡಾ. ಯುಸುಫ್‍ಅಲಿ ನಿಂಬರಗಿ, ಡಾ. ಶ್ರೀನಿವಾಸ ಬಿ.ವಿ ರವರು ಮತ್ತು ಜಿಲ್ಲೆಯ 55 ಬಾಳೆ ರೈತರು ಉಪಸ್ಥಿತರಿದ್ದರು.