ಬಾಳೆಹಣ್ಣಿನ ಹಲ್ವಾ

ಬೇಕಾಗುವ ಸಾಮಾಗ್ರಿಗಳು :
ತುಪ್ಪ : ಮೂರು ಟೇಬಲ್ ಸ್ಪೂನ್
ಸಣ್ಣಗೆ ಹೆಚ್ಚಿದ ಬಾದಾಮಿ, ಗೋಡಂಬಿ ಸ್ವಲ್ಪ
ದ್ರಾಕ್ಷಿ ಸ್ವಲ್ಪ
ರವೆ : ಒಂದು ಕಪ್
ಹಣ್ಣಾದ ಬಾಳೆಹಣ್ಣು: ಐದು
ಹಾಲು : ಎರಡು ಕಪ್
ಸಕ್ಕರೆ : ಐದು ಕಪ್
ಏಲಕ್ಕಿ ಪೌಡರ್
ಮಾಡುವ ವಿಧಾನ:
ಮೊದಲಿಗೆ ಪ್ಯಾನ್‍ಗೆ ಸ್ವಲ್ಪ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿ, ಬಾದಾಮಿಯನ್ನು ಫ್ರೈ ಮಾಡಿಟ್ಟುಕೊಳ್ಳಿ. ಪ್ಯಾನ್‍ಗೆ ಸ್ವಲ್ಪ ತುಪ್ಪ ಹಾಕಿ ಒಂದು ಕಪ್ ರವೆ ಹಾಕಿ ಸುವಾಸನೆ ಬರುವವರೆಗೂ ಹುರಿಯಿರಿ. ಬಳಿಕ ಹಣ್ಣಾದ ಬಾಳೆಹಣ್ಣನ್ನು ಸಣ್ಣಗೆ ತುಂಡರಿಸಿ ಮಿಕ್ಸ್ ಮಾಡಿ. ನಂತರ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ. ಅದಕ್ಕೆ ಸಕ್ಕರೆ ಸೇರಿಸಿ ಹಲ್ವಾ ಹದಕ್ಕೆ ಬರುವತನಕ ಕೈಯಾಡಿಸುತ್ತೀರಿ. ಕೊನೆಗೆ ಏಲಕಿ ಪೌಡರ್ ಹಾಕಿ, ಫ್ರೈ ಮಾಡಿಟ್ಟುಕೊಂಡ ದ್ರಾಕ್ಷಿ, ಗೋಡಂಬಿ, ಬಾದಾಮಿಯನ್ನು ಸೇರಿಸಿ ಕೆಳಗಿಳಿಸಿ.