ಬಾಳೆಹಣ್ಣಿನ ಹಲ್ವಾ

ಬೇಕಾಗುವ ಸಾಮಗ್ರಿಗಳು
ಕದಳಿ/ಏಲಕ್ಕಿ ಬಾಳೆಹಣ್ಣು ೩ ಕೆಜಿ
ಎರಡು ಕಪ್ ಸಕ್ಕರೆ
೧ ಚಮಚ ಏಲಕ್ಕಿ ಪುಡಿ
ಅರ್ಧ ಕಪ್ ತುಪ್ಪ
ಗೋಡಂಬಿ (ನಿಮ್ಮ ಆಯ್ಕೆಗೆ ಬಿಟ್ಟದ್ದು)
ಮಾಡುವ ವಿಧಾನ:
ಒಂದು ದಪ್ಪ ತಳವಿರುವ ಪಾತ್ರೆಯಲ್ಲಿ ಬಾಳೆಹಣ್ಣಿನ ಸಿಪ್ಪೆ ಸುಲಿದು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ. ಆಗಾಗ ತಿರುಗಿಸುತ್ತಾ ಸ್ವಲ್ಪ-ಸ್ವಲ್ಪ ತುಪ್ಪ ಹಾಕುತ್ತಾ ಮಿಕ್ಸ್ ಮಾಡುತ್ತಾ ಇರಬೇಕು. ಹೀಗೆ ಮಿಶ್ರಣ ಗಟ್ಟಿಯಾಗುವವರೆಗೆ ಮಾಡುತ್ತಾ ಇರಬೇಕು. ನಂತರ ಏಲಕ್ಕಿ ಪುಡಿ ಹಾಗೂ ತುಪ್ಪದಲ್ಲಿ ಫ್ರೈ ಮಾಡಿದ ಗೋಡಂಬಿ ಹಾಕಿ ಮತ್ತೊಮ್ಮೆ ಮಿಕ್ಸ್ ಮಾಡಿ. ಈಗ ಒಂದು ಪ್ಲೇಟ್‌ಗೆ ತುಪ್ಪ ಸವರಿ ಅದಕ್ಕೆ ಮಿಶ್ರಣ ಸುರಿದು ತಟ್ಟಿ, ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರಕ್ಕೆ ತಟ್ಟಿದರೆ ಬಾಳೆಹಣ್ಣಿನ ಹಲ್ವಾ ರೆಡಿ. ಇದನ್ನು ಮಾಡಲು ೨ ಗಂಟೆಯಾದರೂ ಬೇಕು. ಇಷ್ಟು ಶ್ರಮಪಟ್ಟರೂ ಅದರ ರುಚಿ ಸವಿಯುವಾಗ ಪಟ್ಟ ಶ್ರಮ ಸಾರ್ಥಕ ಅನಿಸುವುದು. ಇದನ್ನು ೧೫ ದಿನದವರೆಗೆ ಇಡಬಹುದು. ಇನ್ನು ದೇಹದಲ್ಲಿ ಕಬ್ಬಿಣದಂಶದ ಕೊರತೆ ಇರುವವರು ಇದನ್ನು ತಿಂದರೆ ತುಂಬಾ ಒಳ್ಳೆಯದು.