ಬಾಳೆಹಣ್ಣಿನ ಉಪಯೋಗ

ಬೆಳಗ್ಗಿನ ಉಪಾಹಾರ ಜೊತೆಗೆ ಬಾಳೆಹಣ್ಣನ್ನು ಸೇರಿಸಿಕೊಂಡರೆ ಅದರಲ್ಲಿರುವ ಪೋಷಕಾಂಶಗಳು ನಿಮ್ಮ ದೇಹಕ್ಕೆ ಮತ್ತಷ್ಟು ಬಲ ನೀಡುವುದು. ಬಾಳೆಹಣ್ಣು ದೇಹಕ್ಕೆ ಶಕ್ತಿ ನೀಡುವುದು ಎಂದು ಹಿಂದಿನಿಂದಲೂ ಹೇಳುತ್ತಾ ಬರಲಾಗಿದೆ. ಬಾಳೆಹಣ್ಣು ತುಂಬಾ ರುಚಿಕರವಾದ ಹಣ್ಣು ಮತ್ತು ಇದರಿಂದ ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳು ಸಿಗುವುದು.
ದಿನಕ್ಕೆ ಎರಡು ಬಾಳೆಹಣ್ಣು ತಿನ್ನುವುದರ ಲಾಭ
ದಿನಕ್ಕೆ ಎರಡು ಬಾಳೆಹಣ್ಣು ಸೇವಿಸಿದರೆ ರಕ್ತದೊತ್ತಡವು ಸಾಮಾನ್ಯಕ್ಕೆ ಬರುವುದು. ಇದರಲ್ಲಿ ೪೨೦ ಗ್ರಾಂನಷ್ಟು ಪೊಟಾಶಿಯಂ ಇರುವುದೇ ಇದಕ್ಕೆ ಕಾರಣ. ಉಪ್ಪಿನ ನಕಾರಾತ್ಮಕ ಪರಿಣಾಮವನ್ನು ಪೊಟಾಶಿಯಂ ಸರಿದೂಗಿಸುವುದು. ಇದರಿಂದ ರಕ್ತದೊತ್ತಡ ಸಮತೋಲನಕ್ಕೆ ಬರುವುದು.
ಜೀರ್ಣಕ್ರಿಯೆ ಸುಧಾರಣೆ : ಬಾಳೆಹಣ್ಣು ಜೀರ್ಣಕ್ರಿಯೆ ವೃದ್ಧಿಸುವುದು. ಇದರಲ್ಲಿ ಉನ್ನತ ಮಟ್ಟದ ನಿರೋಧಕ ಪಿಷ್ಠವಿದ್ದು, ಇದು ಸುಲಭವಾಗಿ ಜೀರ್ಣವಾಗಲ್ಲ ಮತ್ತು ದೊಡ್ಡ ಕರುಳಿಗೆ ಇದು ಸಾಗಿ ಆರೋಗ್ಯಕರ ಬ್ಯಾಕ್ಟೀರಿಯಾ ಬೆಳವಣಿಗೆ ಮಾಡುವುದು. ಅಜೀರ್ಣ ಅಥವಾ ಎದೆಯುರಿ ಸಮಸ್ಯೆಯಿಂದ ಬಳಲುತ್ತಿದ್ದರೆ ಬಾಳೆಹಣ್ಣು ಸೇವಿಸಿ. ಭೇದಿ ಬಳಿಕ ನೀವು ಬಾಳೆಹಣ್ಣು ತಿನ್ನಬಹುದು. ಯಾಕೆಂದರೆ ಇದು ದೇಹದಲ್ಲಿ ನಾಶವಾಗಿರುವ ಖನಿಜಾಂಶವನ್ನು ಮರಳಿ ನಿರ್ಮಿಸುವುದು.
ತೂಕ ಕಳೆದುಕೊಳ್ಳಲು:ನೀವು ದಿನಕ್ಕೆರಡು ಸಣ್ಣ ಬಾಳೆಹಣ್ಣು ಸೇವನೆ ಮಾಡಿದರೆ ತೂಕ ಕಳೆದುಕೊಳ್ಳಲು ಸಹಕಾರಿಯಾಗಲಿದೆ. ಇದರಲ್ಲಿರುವಂತಹ ಉನ್ನತ ಮಟ್ಟದ ನಾರಿನಾಂಶವು ದೀರ್ಘಕಾಲದ ತನಕ ಹೊಟ್ಟೆ ತುಂಬಿದಂತೆ ಮಾಡುವುದು. ಇದರಲ್ಲಿರುವ ನಿರೋಧಕ ಪಿಷ್ಠವು ಹಸಿವು ತಗ್ಗಿಸುವುದು ಮತ್ತು ತೂಕ ಹೆಚ್ಚಾಗದಂತೆ ತಡೆಯುವುದು. ದಿನದ ಯಾವ ಸಮಯದಲ್ಲಿ ನೀವು ಬಾಳೆಹಣ್ಣು ತಿನ್ನುತ್ತೀರಿ ಎನ್ನುವುದರ ಮೇಲೆ ತೂಕ ಕಳೆದುಕೊಳ್ಳುವುದು ನಿರ್ಧಾರವಾಗುತ್ತದೆ.
ರಕ್ತಹೀನತೆ ಸಮಸ್ಯೆ ಕಡಿಮೆ ಮಾಡುವುದು : ರಕ್ತದಲ್ಲಿ ಕಬ್ಬಿನಾಂಶ ಕೊರತೆಯಿಂದ ಆಗುವ ರಕ್ತಹೀನತೆಯಿಂದ ಬಳಲುವ ಸಮಸ್ಯೆಯನ್ನು ಬಾಳೆಹಣ್ಣು ಕಡಿಮೆ ಮಾಡುವುದು. ಹಿಮೋಗ್ಲೋಬಿನ್ ಕಡಿಮೆ ಇರುವುದರಿಂದ ನಿಶ್ಯಕ್ತಿ ಮತ್ತು ಆಯಾಸವಾಗುವುದು. ದಿನಕ್ಕೆ ಎರಡು ಬಾಳೆಹಣ್ಣು ಸೇವನೆ ಮಾಡಿದರೆ ಕಬ್ಬಿನಾಂಶವು ಕೆಂಪು ರಕ್ತದ ಕಣಗಳನ್ನು ಉತ್ಪತ್ತಿ ಮಾಡಲು ಉತ್ತೇಜಿಸುವುದು.
ಶಕ್ತಿ ನೀಡುವುದು : ಬೆಳಗ್ಗೆ ಉಪಾಹಾರಕ್ಕೆ ಎರಡು ಬಾಳೆಹಣ್ಣುಗಳನ್ನು ಸೇವಿಸಿದಾಗ ಇದರಲ್ಲಿರುವ ಪೊಟಾಶಿಯಂ ದೇಹದಲ್ಲಿ ಶಕ್ತಿ ನಿರ್ಮಾಣ ಮಾಡಲು ನೆರವಾಗುವುದು. ಬಾಳೆಹಣ್ಣು ವ್ಯಾಯಾಮಕ್ಕೆ ಮೊದಲು ಮತ್ತು ಬಳಿಕ ಒಳ್ಳೆಯ ಆಹಾರವಾಗಿದೆ.
ಬಿ.ಪಿ ಕಡಿಮೆಗೊಳಿಸುತ್ತದೆ : ಬಾಳೆಹಣ್ಣಿನಲ್ಲಿ ಅತಿಕಡಿಮೆ ಉಪ್ಪು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ ಇದೆ. ರಕ್ತದೊತ್ತಡ ಕಡಿಮೆಗೊಳಿಸುವಲ್ಲಿ ನೆರವಾಗುತ್ತದೆ ಹಾಗೂ ತನ್ಮೂಲಕ ಹೃದಯ ಸ್ತಂಭನೆಯ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ.
ಜೀರ್ಣಕ್ರಿಯೆ ಕಡಿಮೆಗೊಳಿಸುತ್ತದೆ : ನಮ್ಮ ಜೀರ್ಣರಸದಲ್ಲಿರುವ ಅಂಶಗಳಲ್ಲಿ ಪೆಕ್ಟಿನ್ ಸಹಾ ಒಂದು. ಇದು ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ಕಾರಣ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ಹೆಚ್ಚುವರಿ ಪೆಕ್ಟಿನ್ ಆಹಾರದಲ್ಲಿನ ವಿಷಕಾರಿ ವಸ್ತುಗಳನ್ನು ಒಡೆದು ತ್ಯಾಜ್ಯರೂಪದಲ್ಲಿ ದೇಹದಿಂದ ಹೊರಹಾಕಲು ಸಹಕಾರಿಯಾಗಿದೆ. ಜೊತೆಗೇ ದೇಹ ಅರಗಿಸಿಕೊಳ್ಳಲಾರದ ಖನಿಜಗಳನ್ನು ನಿವಾರಿಸಲೂ ಬಳಕೆಯಾಗುತ್ತದೆ.