ಬಾಳೂರನಲ್ಲಿ ವೀರಭದ್ರಪ್ಪ ಅಪ್ಪ ಅವರ ಭವ್ಯ ಪಲ್ಲಕ್ಕಿ ಮೆರವಣಿಗೆ

ಬೀದರ:ಎ.13: ಭಾಲ್ಕಿ ತಾಲ್ಲೂಕಿ ಬಾಳೂರ ಗ್ರಾಮದಲ್ಲಿ ತಪೋನಿದಿ, ಮಹಾಸಂತ ಶ್ರೀ ವೀರಭದ್ರಪ್ಪ ಅಪ್ಪ ಪಲ್ಲಕಿ ಬುಧವಾರ ನಸುಕಿನಜಾವ ಆರಂಭವಾಯಿತ್ತು. ದೇವಸ್ಥಾನ ದಿಂದ ಆರಂಭವಾದ ಮೆರವಣಿಗೆ ಊರಿನ ಪ್ರಮುಖ ಬೀದಿಗಳ ಮುಖಾಂತರ ಸಂಚರಿಸಿ ಹನುಮಾನ ದೇವಸ್ಥಾನದಲ್ಲಿ ದಿಂಡಿ ಒಡೆಯಲಾಯಿತ್ತು.

ಮೆರವಣಿಗೆಯಲ್ಲಿ ವೀರಭದ್ರಪ್ಪ ಅಪ್ಪ ಅವರ ಭಾವಚಿತ್ರ, ಅಪ್ಪವರ ಪಾದುಕೆ, ಪಲ್ಲಕಿಯಲ್ಲಿ ಇಟ್ಟಿದರು, ಸುಮಂಗಲಿಯರು ಆರುತಿ ಹಿಡಿದಿದರು, ಯುವಕರಿಂದ ನೃತ್ಯ, ದಾರಿಯುದಕ್ಕೂ ಜಯಘೋಷ ಮುಳುಗಿತ್ತು.

77ನೇ ಪುಣ್ಯತಿಥಿ ಪ್ರಯುಕ್ತ ಜಾತ್ರಾ ಮಹೋತ್ಸವ ಮಂಗಳವಾರ ಸಾಯಂಕಾಲ “ಅಗ್ನಿಪೂಜೆ” ಅದೂರಿಯಾಗಿ ಭಕ್ತಿ ಶೃದ್ಧೆಯಿಂದ ಜರುಗಿತ್ತು ಈ ಪೂಜೆ ವೆಂಕಟರಾವ ಮಹಾರಾಜ ನಡೆಸಿಕೊಟ್ಟರು ಪ್ರಮುಖರಾದ ಶಿವಕುಮಾರ ಬುಳ್ಳಾ, ರಾಮು ದೇಶಮುಖ, ಕಾಮಶೆಟ್ಟಿ ಬುಳ್ಳಾ, ಈಶ್ವರ ಕಣಜೆ, ಮದಪ್ಪ ಚಟ್ನಳೆ, ಕಂಟಯ್ಯ ಸ್ವಾಮಿ, ಸಿದ್ರಾಮ ದೇಶಮುಖ, ಮಲ್ಲಿಕಾರ್ಜುನ ಪಾಟೀಲ್, ದೇವಸ್ಥಾನದ ಪೂಜಾರಿ ಓಂಕಾರ ಸ್ವಾಮಿ, ಬಾಪು ದೇಶಮುಖ, ಸತೀಷ ದೇಶಮುಖ, ಧನರಾಜ ಕರಂಜೆ, ಕಾಶಿನಾಥ ಎಸU,É ಜಗನ್ನಾಥ ಕರಂಜೆ ಅನೇಕರು ಪಾಲ್ಗೋಂಡಿದರು. ತದನಂತರ ಮಹಾದಾಸೋಹ ಆರಂಭವಾಯಿತ್ತು.

ರಾತ್ರಿ ಇಡೀ ಸಂಗೀತ ಭಜನೆ ಜರುಗಿತ್ತು ಇದರಲ್ಲಿ ಅಂಬೆಸಂಗಾವಿ, ಭಾಲ್ಕಿ, ನಿಡೋದಾ, ಔರಾದ, ಬೀದರ,ನಾಗೂರ (ಕೆ) ಗೋರನಾಳ ಮುಂತಾದ ಕಡೆಯಿಂದ ಭಜನೆ ತಂಡಗಳು ಭಾಗವಹಿಸಿದವು ಅಲ್ಲದೇ ಬೀರಪ್ಪ ಮಾಸಿಮಾಡ, ಶಾಂತಮ್ಮ ಡೊಣಗಾಪುರ, ಪ್ರಕಾಶ ಮಾಸಿಮಾಡ, ದೀಲಿಪ ಬಿರಾದರ, ಸೂರ್ಯಕಾಂತ ಪಾಟೀಲ್ ನಾಗೂರ ಮೊದಲಾದ ಸಂಗೀತಗಾರರು ತಮ್ಮ ಕಂಠದಿಂದ ಸಂಗೀತ ಸುಧೆ ಹರಿಸಿದರು ನಸಿಕಿನಲ್ಲಿ “ಭಾರ ಅಭಂಗ” ಭಜನೆ ನಡೆಯಿತ್ತು. ಹೆಸರಾಂತ ಹಾಸ್ಯ ಕಲಾವಿದ ಪ್ರಕಾಶ ಕುಲಕರ್ಣಿ ಮುಗನೂರ ಸಂಗೀತ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಇಡೀ ದೇವಸ್ಥಾನ ರವೀಂದ್ರ ಕರಂಜೆ ಕೊಟಗ್ಯಾಳ ವಿದ್ಯುತ್ತದೀಪದಿಂದ ಅಲಂಕಾರಗೊಳಿಸಿದರು. ಸಾವಿರಾರು ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದರು,